ಜೆಎನ್ ಯು ದೇಶ ವಿರೋಧಿ ಪ್ರಕರಣ: ದೆಹಲಿ ಪೊಲೀಸ್ ಉಗ್ರ ನಿಗ್ರಹ ಪಡೆಯಿಂದ ತನಿಖೆ ಸಾಧ್ಯತೆ

ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ದೇಶ ವಿರೋಧಿ ಚಟುವಟಿಕೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ...
ಬಿ.ಎಸ್ ಬಸ್ಸಿ
ಬಿ.ಎಸ್ ಬಸ್ಸಿ
Updated on: 
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ದೇಶ ವಿರೋಧಿ ಚಟುವಟಿಕೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು, ಉಗ್ರ ನಿಗ್ರಹ ಬ್ರ್ಯಾಂಚ್ ನಿಂದ ತನಿಖೆ ನಡೆಸಲು ಮುಂದಾಗಿದ್ದಾರೆ.
ಜೆಎನ್ ಯು ವಿವಾದ, ಸುನಂದಾ ಪುಷ್ಕರ್ ಅಥವಾ ಇತರೆ ಯಾವುದೇ ಪ್ರಕರಣವನ್ನು ನಮಗೆ ಬಿಡಿ, ನಾವು ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು ಹೇಳಿದ್ದಾರೆ.
ಜೆಎನ್ ಯು ದೇಶದ್ರೋಹ ಪ್ರಕರಣವನ್ನು ನಮ್ಮ ಉಗ್ರ ನಿಗ್ರಹ ವಿಭಾಗಕ್ಕೆ ವರ್ಗಾವಣೆ ಮಾಡಿ. ಜೆಎನ್ ಯು ವಿದ್ಯಾರ್ಥಿಗಳು ಮತ್ತು ಉಗ್ರ ಅಫ್ಘಲ್ ಗುರು ನಡುವಿನ ಸಂಬಂಧದ ಕುರಿತು ತನಿಖೆ ನಡೆಸುತ್ತೇವೆಎಂದು ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಅವರು ಪತ್ರ ಬರೆದಿದ್ದಾರೆ.
ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಬಂಧನ ನಂತರ ಶನಿವಾರ ಹಲವು ರಾಜಕೀಯ ಪಕ್ಷಗಳ ನಾಯಕರು ವಿವಿ ಕ್ಯಾಂಪಸ್ ಗೆ ಭೇಟಿ ನೀಡಿದ ನಂತರ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
10, 20, ಅಥವಾ 50 ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆ ಕೂಗಿರಬಹುದು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಆದರೆ ಇಡೀ ವಿವಿಯನ್ನೇ ರಾಷ್ಟ್ರ ವಿರೋಧಿಯಾಗಿ ಬಿಂಬಿಸುತ್ತಿರುವುದು ಏಕೆ? ಎಂದು ಕಾಂಗ್ರೆಸ್ ನಾಯಕ ಆರ್.ಎಸ್. ಸುರ್ಜೆವಾಲ್ ಅವರು ಪ್ರಶ್ನಿಸಿದ್ದಾರೆ.
ಇನ್ನು ಈ ಸಂಬಂಧ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಪ್ರತ್ಯೇಕವಾದಿಗಳನ್ನು ಮತ್ತು ಉಗ್ರರನ್ನು ಎಐಸಿಸಿ ಕಚೇರಿಯಲ್ಲಿಟ್ಟು, ಪುಷ್ಪ ನಮನ ಸಲ್ಲಿಸಿದೆ ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com