
ಅಸ್ಸಾಂ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಮುಸ್ಲಿಂ ವಿರೋಧಿ ಕಾಮೆಂಟ್ ಹಾಕಿದ್ದಕ್ಕಾಗಿ ಕಾಬ್ರಿ ಆಂಗ್ಲೊಂಗ್ ಜಿಲ್ಲೆಯ ಪೊಲೀಸ್ ಉಪವರಿಷ್ಠಾಧಿಕಾರಿ ಅಂಜಾನ್ ಬೋರಾ ಸಸ್ಪೆಂಡ್ ಆಗಿದ್ದಾರೆ.
ಫೇಸ್ಬುಕ್ ಅಕೌಂಟನಲ್ಲಿ ಡಿಸಿಪಿ ಅಂಜಾನ್ ಬೋರಾ ಅವರು ನೀಡುತ್ತಿದ್ದ ಮುಸ್ಲಿಂ ವಿರೋಧಿ ಕಾಮೆಂಟ್ಗಳಿಂದ ಕೆರಳಿದ ಮುಸ್ಲಿಂ ಮುಖಂಡರು ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರಿಂದಾಗಿ ಅಂಜಾನ್ ಬೋರಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಬೋರಾ ನನ್ನ ಫೇಸ್ಬುಕ್ ಅಕೌಂಟ್ನ್ನು ಯಾರೋ ಹ್ಯಾಕ್ ಮಾಡಿದ್ದು, ನನ್ನ ಹೇಳಿಕೆಗೂ ಇಲ್ಲಿ ನಮೂದಿಸಲಾಗಿರುವ ಬರಹಕ್ಕೂ ಭಿನ್ನತೆ ಇದೆ ಎಂದು ತಿಳಿಸಿದ್ದಾರೆ.
Advertisement