ಮಗಳ ಮದುವೆಯ ಖರ್ಚು ಕಮ್ಮಿ ಮಾಡಿ, ರೈತರಿಗೆ ರು. 6 ಲಕ್ಷ ನೀಡಿದ ಇಂಜಿನಿಯರ್!

ಮಗಳ ಮದುವೆಯನ್ನು ಅದ್ದೂರಿಯಾಗಿ ಆಚರಿಸದೆ ಖರ್ಚು ಕಡಿಮೆ ಮಾಡಿಕೊಂಡು, ಅದರಲ್ಲಿ ರು. 6 ಲಕ್ಷವನ್ನು ಬರಪೀಡಿತ ಪ್ರದೇಶದ ರೈತರಿಗೆ ಸಹಾಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಥಾಣೆ: ಮಗಳ ಮದುವೆಯನ್ನು ಅದ್ದೂರಿಯಾಗಿ ಆಚರಿಸದೆ ಖರ್ಚು ಕಡಿಮೆ ಮಾಡಿಕೊಂಡು, ಅದರಲ್ಲಿ ರು. 6 ಲಕ್ಷವನ್ನು ಬರಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡುವ ಮೂಲಕ  ವಿವೇಕ್ ವಾಡ್ಕೆ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆ  ನಿವಾಸಿಯಾದ 59ರ ಹರೆಯದ ಕೆಮಿಕಲ್ ಇಂಜಿನಿಯರ್ ವಿವೇಕ್ ವಾಡ್ಕೆ ಈ ರೀತಿ ರೈತರಿಗೆ ನೆರವಾಗಿದ್ದಾರೆ. ವಿವೇಕ್ ಮತ್ತು ಆತನ ಪತ್ನಿ ವಸಂತಿ ಅವರಿಗೆ ಸಾಮಾಜಿಕ ಕಾರ್ಯಗಳೆಂದರೆ ಇಷ್ಟ . ಬಯೋಇನ್‌ಫಾರ್ವಾಟಿಕ್ಸ್ ಪದವೀಧರೆಯಾದ ಮಗಳು ಜಯ್  ವಿವಾಹದೊಂದಿಗೆ ಯಾವುದಾದರೂ ಸಾಮಾಜಿಕ ಕಾರ್ಯಗಳನ್ನು ಮಾಡಬೇಕೆಂದು ವಿವೇಕ್ ತೀರ್ಮಾನಿಸಿದ್ದರು. ಹಾಗೆ ಮಗಳ ಮದುವೆಯ ಖರ್ಚನ್ನು ಕಮ್ಮಿ ಮಾಡಿ ಬರಪೀಡಿತ ಪ್ರದೇಶದ ರೈತರಿಗೆ ರು. 6 ಲಕ್ಷವನ್ನು ನೀಡಲಾಯಿತು.
ಎರಡು ತಿಂಗಳ ಹಿಂದ ಜಯ್ ಅವರ ಮದುವೆ ನಡೆದಿದ್ದು, ವಿವಾಹ ದಿನವೇ ರೈತರಿಗೆ ಹಣ ನೀಡಲಾಗಿತ್ತು. ರಾಜ್ಯದಲ್ಲಿನ ಬರಪ್ರದೇಶಗಳ ಸ್ಥಿತಿಯ ಬಗ್ಗೆ ಅರಿತಾಗ ಅಲ್ಲಿನ ರೈತರಿಗೆ ಸಹಾಯ ಮಾಡಬೇಕೆಂದೆನಿಸಿತು. ಹಾಗೆ ನನ್ನ ಕೈಲಾದ ಸಹಾಯ ಮಾಡಿದೆ ಅಂತಾರೆ ವಿವೇಕ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com