ಬಿಹಾರದಲ್ಲಿ ಎಎಸ್ಸೈ, ಕಂಟ್ರಾಕ್ಟರ್ ಗುಂಡಿಟ್ಟು ಹತ್ಯೆ

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಕಾಂಟ್ರಾ ಕ್ಟರ್ ಒಬ್ಬರನ್ನು ಗುಂಡು...
ಪೊಲೀಸ್
ಪೊಲೀಸ್

ಹಾಜಿಪುರ/ನವದೆಹಲಿ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಕಾಂಟ್ರಾ ಕ್ಟರ್ ಒಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇದರಿಂದ ಕ್ರುದ್ಧಗೊಂಡಿರುವ ಕೇಂದ್ರ ಸಚಿವ ಮತ್ತು ಹಾಜಿಪುರ ಸಂಸದ ರಾಮ್ವಿ ಲಾಸ್ ಪಾಸ್ವಾನ್ ಬಿಹಾರದಲ್ಲಿ ಜಂಗಲ್ ರಾಜ್ ಮತ್ತೆ ಕಾಲಿರಿಸಿದೆ ಎಂದು ಟೀಕಿಸಿದ್ದಾರೆ. ಅಪರಿ ಚಿತರು ಎಎಸ್‍ಐಯನ್ನು ಹತ್ಯೆ ಮಾಡಿದ್ದಾರೆ. ಆದರೆ ಕಾರಣ ಗೊತ್ತಾಗಿಲ್ಲ ಎಂದು ವೈಶಾಲಿ ಜಿಲ್ಲಾ ಎಸ್ಪಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಪ್ರಕಾರ ದೇಹದಲ್ಲಿ ನಾಲ್ಕು ಗುಂಡು ತಗಲಿವೆ. ಮತ್ತೊಂದು ಘಟನೆಯಲ್ಲಿ ಕಾಂಟ್ರಾಕ್ಟರ್ ಒಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಕೃತ್ಯಕ್ಕೂ ಕಾರಣ ತಿಳಿದುಬಂದಿಲ್ಲ ಎಂದಿದ್ದಾರೆ ಪೊಲೀಸರು. ಮತ್ತೊಂದೆಡೆ ಹಾಜಿಪುರದಲ್ಲಿ ವೈದ್ಯರೊ ಬ್ಬರ ಮನೆಯಲ್ಲಿ 12 ಸುತ್ತುಗಳಷ್ಟು ಗುಂಡು ಹಾರಾಟ ನಡೆಸಲಾಗಿದೆ. ಈ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ 'ಬಿಹಾರದಲ್ಲಿ ಜಂಗಲ್ ರಾಜ್ ಹಿಂತಿರುಗಿದೆ. ಈ ಬಗ್ಗೆ ಮುಖ್ಯಮಂತ್ರಿ ನಿತೀಶ್ಕುಮಾರ್ ಅಸಹಾಯಕರಾಗಿದ್ದಾರೆ. ವೈಶಾಲಿ ಜಿಲ್ಲೆಯಿಂದ ಡಿಸಿಎಂ ಸೇರಿದಂತೆ ಮೂವರು ಸಚಿವರು ಸಂಪುಟದಲ್ಲಿದ್ದಾರೆ. ಹೀಗಿದ್ದರೂ ಇಂಥ ಘಟನೆಗಳು ನಡೆಯುತ್ತಿವೆ'' ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com