ವೃದ್ಧ ಅತ್ತೆಯ ಹತ್ಯೆಗೆ ಯತ್ನಿಸಿದ ಸೊಸೆ: ಮಹಿಳೆಯ ಪೈಶಾಚಿಕ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹಾಸಿಗೆ ಹಿಡಿದು ಮಲಗಿರುವ 70 ವರ್ಷದ ಅತ್ತೆಯ ಕುತ್ತಿಗೆಗೆ ಹಗ್ಗ ಸುತ್ತಿ ಕೊಲ್ಲಲು ಹಾಗೂ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಥಳಿಸುತ್ತಿರುವ ಸೊಸೆಯ ಪೈಶಾಚಿಕ ...
ವೃದ್ದ ಅತ್ತೆಗೆ ಥಳಿಸುತ್ತಿರುವ ಸೊಸೆ
ವೃದ್ದ ಅತ್ತೆಗೆ ಥಳಿಸುತ್ತಿರುವ ಸೊಸೆ

ಬಿಜ್ನೂರ್ : ಹಾಸಿಗೆ ಹಿಡಿದು ಮಲಗಿರುವ 70 ವರ್ಷದ ಅತ್ತೆಯ ಕುತ್ತಿಗೆಗೆ ಹಗ್ಗ ಸುತ್ತಿ ಕೊಲ್ಲಲು ಹಾಗೂ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಥಳಿಸುತ್ತಿರುವ ಸೊಸೆಯ ಪೈಶಾಚಿಕ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಂಥಹ ಪೈಶಾಚಿಕ ಕೃತ್ಯ  ನಡೆದಿರುವುದು ಉತ್ತರಪ್ರದೇಶದ ಬಿಜ್ನೂರ್ ನಲ್ಲಿ. ಸಂಗೀತಾ ಜೈನ್ ಎಂಬಾಕೆ ತನ್ನ 70 ವರ್ಷದ ಅತ್ತೆ ರಾಜ್ರಾನಿ ಜೈನ್ ಗೆ ಮನಬಂದಂತೆ ಥಳಿಸುತ್ತಿರುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜನವರಿ 5ರಂದು ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತ ಕುಂದನ್ ಶ್ರೀವಾಸ್ತವ್ ತಮ್ಮ ಫೇಸ್ ಬುಕ್ ಪುಟದಲ್ಲಿ ಅಪ್ ಲೋಡ್ ಮಾಡಿದ್ದರು. ಅಷ್ಟೇ ಅಲ್ಲದೇ ಸಂಬಂಧ ಪಟ್ಟವರು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಗಂಭೀರವಾಗಿ ಗಾಯಗೊಂಡಿರುವ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಸೆ ಪೈಶಾಚಿಕ ಕೃತ್ಯದ ಬಗ್ಗೆ ರಾಜ್ರಾನಿ ಮಾಹಿತಿ ನೀಡಿದ್ದಾರೆ. ಗಂಡ ಸಂದೀಪ್ ಕುಮಾರ್ ಜೈನ್ ಕೂಡಾ ಹೆಂಡತಿಯ ಕ್ರೌರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಂಗೀತಾ ವಿರುದ್ಧ ಐಪಿಸಿ ಸೆಕ್ಷನ್ 307ರ ಪ್ರಕಾರ ದೂರು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com