3 ಕೋಟಿ ಮೌಲ್ಯದ ಚಿನ್ನ ತೊಟ್ಟು ಅರ್ಧಕುಂಭದಲ್ಲಿ ಪಾಲ್ಗೊಂಡ ಗೋಲ್ಡನ್ ಬಾಬಾ

ಈ ಬಾಬಾ ಮೈ ಮೇಲೆ ಬರೋಬ್ಬರಿ 15.5 ಕೆ.ಜಿ. ಚಿನ್ನ ಇದೆ. ಅದರ ಅಂದಾಜು ಮೌಲ್ಯ ಸುಮಾರು 3 ಕೋಟಿ. ದಿನವೂ ಇಷ್ಟು ಭಾರದ ಚಿನ್ನ ...
ಗೋಲ್ಡನ್ ಬಾಬಾ
ಗೋಲ್ಡನ್ ಬಾಬಾ
Updated on

ಹರಿದ್ವಾರ: ಅರ್ಧ ಕುಂಭ ಮೇಳದ ಈ ಬಾರಿಯ ವಿಶೇಷ ಆಕರ್ಷಣೆ ಗೋಲ್ಡನ್‌ ಬಾಬಾ. ಮೈಮೇಲೆ ಕೆ.ಜಿ ಗಟ್ಟಲೆ ಆಭರಣ ಹಾಕಿಕೊಂಡಿದ್ದ ಬಾಬಾ ತಮ್ಮ ಅನುಯಾಯಿಗಳ ಜತೆ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಈ ಬಾಬಾ ಮೈ ಮೇಲೆ ಬರೋಬ್ಬರಿ 15.5 ಕೆ.ಜಿ. ಚಿನ್ನ ಇದೆ. ಅದರ ಅಂದಾಜು ಮೌಲ್ಯ ಸುಮಾರು 3 ಕೋಟಿ. ದಿನವೂ ಇಷ್ಟು ಭಾರದ ಚಿನ್ನ ಹೊತ್ತು ನಡೆದಾಡುತ್ತಾರೆ.

ಮಿರಮಿರನೆ ಹೊಳೆಯುತ್ತಿದ್ದ ಚಿನ್ನದ ಸರಗಳು, ಉಂಗುರಗಳ, ಕೈಬಂದಿಯನ್ನು ಹಾಕಿ ಶುಕ್ರವಾರ ಅರ್ಧ ಕುಂಭ ಮೇಳದ ಸ್ನಾನ ಘಟಕ್ಕೆ ಇಳಿದಿದ್ದ ಬಾಬಾ ಅವರನ್ನು ನೋಡಲೆಂದು ಹಲವರು ಸ್ನಾನ ಘಟ್ಟದ ಬಳಿ ಜಮಾಯಿಸಿದ್ದರು. 27 ಲಕ್ಷ ಮೌಲ್ಯದ ಅವರ ವಜ್ರದ ಕೈ ಗಡಿಯಾರ ಸಹ ಎಲ್ಲರ ಗಮನ ಸೆಳೆಯಿತು.

ನಾಗಾ ಸಾಧುಗಳು, ಜುನಾ ಅಕಾಡಾದ ಬಾಬಾಗಳು ಹೆಚ್ಚಾಗಿ ಕಾಣಿಸಿಕೊಳ್ಳದ ಅರ್ಧಕುಂಭದಲ್ಲಿ ಗೋಲ್ಡನ್‌ ಬಾಬಾ ಅವರಂಥ ವಿಭಿನ್ನ ವ್ಯಕ್ತಿತ್ವದ ಸಾಧುಗಳು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಬಾಬಾ ಅವರ ನಿಜನಾಮ ಸುಧೀರ್‌ ಕುಮಾರ್‌ ಮಕ್ಕಡ್‌, ಸನ್ಯಾಸ ಸ್ವೀಕರಿಸುವ ಮೊದಲು ದಿಲ್ಲಿಯಲ್ಲಿ ಜವಳಿ ಉದ್ಯಮ ನಡೆಸುತ್ತಿದ್ದರು. 'ಉದ್ಯಮಿಯಾಗಿ ನಾನು ತಪ್ಪುಗಳನ್ನು ಮಾಡಿರುತ್ತೇನೆ. ಅದಕ್ಕಾಗಿ ಈ ಪುಣ್ಯ ಸ್ನಾನ. ಇನ್ನು ಉಳಿದ ಜೀವನವನ್ನು ಇತರರಿಗೆ ಸಹಾಯ ಮಾಡುತ್ತಾ ಬದುಕುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com