ಪಠಾಣ್ ಕೋಟ್ ರೈಲು ನಿಲ್ದಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಯುವಕನ ಬಂಧನ

ಶಸ್ತ್ರಾಸ್ತ್ರ ಹೊಂದಿದ್ದ ಯುವಕನೊಬ್ಬನನ್ನು ಪಠಾಣ್ ಕೋಟ್ ರೈಲ್ವೇ ಪೊಲೀಸರು ಬುಧವಾರ ಬಂಧಿಸಿದ್ದಾರೆ...
ಪಠಾಣ್ ಕೋಟ್
ಪಠಾಣ್ ಕೋಟ್
Updated on

ಅಮೃತ್ ಸರ್: ಶಸ್ತ್ರಾಸ್ತ್ರ ಹೊಂದಿದ್ದ ಯುವಕನೊಬ್ಬನನ್ನು ಪಠಾಣ್ ಕೋಟ್ ರೈಲ್ವೇ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಯುವಕನಿಂದ ಸ್ವದೇಶಿ ನಿರ್ಮಿತ ಪಿಸ್ತೂಲು ಮತ್ತು ಕ್ಯಾಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯುವಕನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ನಂತರ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಯುವಕ ತಾನು ಮಧ್ಯಪ್ರದೇಶದವನೆಂದು ಹೇಳಿಕೊಂಡಿದ್ದು, ಜಮ್ಮು ಕಾಶ್ಮೀರಕ್ಕೆ ತೆರಳುತ್ತಿದ್ದಾಗಿ ತಿಳಿಸಿದ್ದಾನೆ.

ನಿನ್ನೆಯಷ್ಟೇ ಪಠಾಣ್ ಕೋಟ್ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿತ್ತು. ತಕ್ಷಣ ಅದನ್ನು ಸ್ಕ್ವಾಡ್ ಪರೀಕ್ಷಿಸಿ, ಯಾವುದೇ ಸ್ಫೋಟಕಗಳು ದೊರೆತಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com