ಶೌಚಾಲಯ ಕಟ್ಟಿಸಲಿಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ

ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಹೆತ್ತವರನ್ನು ಒತ್ತಾಯಿಸಿ, ಅದರಲ್ಲಿ ವಿಫವಾದ 17 ವಷ೯ದ ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತೆಲಂಗಾಣದ ನಲ್ಗೊಂಡಾ ಜಿಲ್ಲೆಯಲ್ಲಿ ನಡೆದಿದೆ...
ಆತ್ಮಹತ್ಯೆಗೆ ಶರಣಾದ ಯುವತಿ ರೇಖಾ (ಚಿತ್ರಕೃಪೆ: ಐಬಿಎನ್)
ಆತ್ಮಹತ್ಯೆಗೆ ಶರಣಾದ ಯುವತಿ ರೇಖಾ (ಚಿತ್ರಕೃಪೆ: ಐಬಿಎನ್)

ನಲ್ಗೊಂಡಾ: ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಹೆತ್ತವರನ್ನು ಒತ್ತಾಯಿಸಿ, ಅದರಲ್ಲಿ ವಿಫವಾದ 17 ವಷ೯ದ  ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತೆಲಂಗಾಣದ ನಲ್ಗೊಂಡಾ  ಜಿಲ್ಲೆಯಲ್ಲಿ ನಡೆದಿದೆ.

ನಲ್ಗೊಂಡಾ ಜಿಲ್ಲೆಯ ಜೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ ಕೇದಪಾರ್ತಿ ರೇಖಾ ಎಂಬುವವರು ಹೆತ್ತವರ ಜತೆ  ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಕೂಲಿ ಕೆಲಸಕ್ಕೆ ತೆರಳುವ ಪೋಷಕರು ನಿರ್ಮಾಣ ವೆಚ್ಚಭರಿಸಲು  ಅಸಮರ್ಥರಾಗಿದ್ದರು. ಗೋಣಿಚೀಲ ಇತರೆ ತಾತ್ಕಾಲಿಕ ವ್ಯವಸ್ಥೆಯ ಟಾಯ್ಲೆಟ್ ಬಳಸುವುದಕ್ಕೆ ರೇಖಾಗೆ ಮುಜುಗರ  ಉಂಟಾಗುತ್ತಿತ್ತು. ಈ ಹಿನ್ನಲೆಯಲ್ಲಿ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು.

ಬಡಕುಟುಂಬದ ಅವರಿಗೆ ಅದು ಊಹಿಸಲೂ ಅಸಾಧ್ಯವಾಗಿತ್ತು. ಅಂತಿಮವಾಗಿ ಹೆತ್ತವರನ್ನು ಒಲಿಸುವಲ್ಲಿ ವಿಫಲವಾದ್ದರಿಂದ  ರೇಖಾ ಬೇಸರಗೊ೦ಡು ಆಕೆ ಸೋಮವಾರ ಪಾಲಕರು ಕೂಲಿ ಕೆಲಸಕ್ಕೆ೦ದು ತೆರಳಿದ ಬಳಿಕ ಬೆ೦ಕಿಹಚ್ಚಿಕೊ೦ಡು ಆತ್ಮಹತ್ಯೆ  ಮಾಡಿಕೊ೦ಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜತೆಗೆ ಕಿಡಿಗೇಡಿಗಳ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ  ಆತ್ಮಹತ್ಯೆಗೆ ಶರಣಾಗಿದ್ದಾಳೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿ ಕೆ.ರಾಜು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com