ಸ್ವಾತಿ ಹತ್ಯೆಗೆ ಕಾರಣವಾಯ್ತೆ ಒನ್ ಸೈಡ್ ಲವ್ ಸ್ಟೋರಿ?

ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಟೆಕಿ ಸ್ವಾತಿ ಹತ್ಯೆಗೆ ಒನ್ ಸೈಡ್ ಲವ್ ಸ್ಟೋರಿ ಕಾರಣವಾಯಿತೇ ಎಂಬ ಶಂಕೆ ಮೂಡ ತೊಡಗಿದೆ...
ಟೆಕಿ ಸ್ವಾತಿ ಹತ್ಯೆ ಪ್ರಕರಣ (ಸಂಗ್ರಹ ಚಿತ್ರ)
ಟೆಕಿ ಸ್ವಾತಿ ಹತ್ಯೆ ಪ್ರಕರಣ (ಸಂಗ್ರಹ ಚಿತ್ರ)
Updated on

ಚೆನ್ನೈ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಟೆಕಿ ಸ್ವಾತಿ ಹತ್ಯೆಗೆ ಒನ್ ಸೈಡ್ ಲವ್ ಸ್ಟೋರಿ ಕಾರಣವಾಯಿತೇ ಎಂಬ ಶಂಕೆ ಮೂಡ ತೊಡಗಿದೆ.

ಪೊಲೀಸರು ನೀಡಿರುವ ಮಾಹಿತಿಗಳು ಇಂತಹ ಅನುಮಾನ ಮೂಡುವಂತೆ ಮಾಡಿದ್ದು, ಪೊಲೀಸ್ ಮೂಲಗಳ ಪ್ರಕಾರ ಪ್ರಸ್ತುತ ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿರುವ ಆರೋಪಿ ರಾಮ್  ಕುಮಾರ್ 3 ತಿಂಗಳಿನಿಂದ ಟೆಕಿ ಸ್ವಾತಿಯನ್ನು ಹಿಂಬಾಲಿಸುತ್ತಿದ್ದನಂತೆ. ಆರೋಪಿ ರಾಮ್ ಕುಮಾರ್ ವಾಸಿಸುತ್ತಿರುವ ಮನೆ ಕೂಡ ಸ್ವಾತಿ ಮನೆ ಇದ್ದ ಅಮ್ಮನ್ ಕೋಯಿಲ್ (ಅಮ್ಮನ  ದೇವಸ್ತಾನ)ರಸ್ತೆಗೆ ಎದುರುಗಡೆಯೇ ಇದ್ದು, ನಿತ್ಯ ಸ್ವಾತಿಯನ್ನು ನೋಡುತ್ತಿದ್ದ ರಾಮ್ ಕುಮಾರ್ 3 ತಿಂಗಳ ಹಿಂದಿನಿಂದಲೂ ಆಕೆಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಅಲ್ಲದೆ ಸ್ವಾತಿ ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸುತ್ತಿದ್ದ ರಾಮ್ ಕುಮಾರ್, ಆಕೆ ಕೆಲಸ ಮಾಡುತ್ತಿದ್ದ ಪರಣೂರ್ ಪ್ರದೇಶದವರೆಗೂ ಹೋಗುತ್ತಿದ್ದನಂತೆ. ಸ್ವಾತಿ  ಯಾವುದೇ ದೇವಸ್ತಾನಕ್ಕೆ ಹೋದರೂ ರಾಮ್ ಕುಮಾರ್ ಕೂಡ ಅದೇ ದೇವಸ್ತಾನಕ್ಕೆ ಹೋಗಿ ಸ್ವಾತಿಯನ್ನು ನೋಡುತ್ತಿದ್ದನಂತೆ. ಒಮ್ಮೆ ತನ್ನ ಪ್ರೀತಿಯ ವಿಚಾರ ತಿಳಿಸಿದ್ದ ರಾಮ್ ಕುಮಾರ್  ನನ್ನು ಸ್ವಾತಿ ತಿರಸ್ಕರಿಸಿದ್ದಳು. ಆದರೆ ಜೂನ್ 24ರಂದು ಅಂದರೆ ಸ್ವಾತಿ ಹತ್ಯೆ ನಡೆದ ದಿನ ಮತ್ತೆ 2ನೇ ಬಾರಿಗೆ ಸ್ವಾತಿಯೊಂದಿಗೆ ರಾಮ್ ಕುಮಾರ್ ಪ್ರೇಮ ನಿವೇದನೆ ಮಾಡಿದ್ದು, ಆಗಲೂ  ಸ್ವಾತಿ ನಿರಾಕರಿಸಿದ ಹಿನ್ನಲೆಯಲ್ಲಿ ನುಂಗಂಬಾಕ್ಕಮ್ ನಿಲ್ದಾಣದಲ್ಲಿ ರಾಮ್ ಕುಮಾರ್ ಸ್ವಾತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ.

ಕೇವಲ 11 ನಿಮಿಷದಲ್ಲಿ ಸ್ವಾತಿಯನ್ನು ಕೊಂದು ರಾಮ್ ಕುಮಾರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಮನೋವಿಕೃತಿಯ ರಾಮ್ ಕುಮಾರ್ ನ ಒನ್ ಸೈಡೆಡ್ ಲವ್  ಸ್ಟೋರಿ ಟೆಕಿ ಸ್ವಾತಿ ಹತ್ಯೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com