ಎಂಟಿಸಿಆರ್ ಗೆ ಭಾರತ ಸೇರ್ಪಡೆಯಿಂದ ಚೀನಾಕ್ಕೆ ಆತಂಕ: ಭರತ್ ಕಾರ್ನಾಡ್

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟ( ಎಂಟಿಸಿಆರ್)ಕ್ಕೆ ಭಾರತ ಸೇರ್ಪಡೆಗೊಂಡಿರುವುದು ಚೀನಾಕ್ಕೆ ಸವಾಲಾಗಬಹುದು...
ಕಳೆದ ವಾರ ದೆಹಲಿಯಲ್ಲಿ ನಡೆದ ಎಂಟಿಸಿಆರ್ ಒಪ್ಪಂದ
ಕಳೆದ ವಾರ ದೆಹಲಿಯಲ್ಲಿ ನಡೆದ ಎಂಟಿಸಿಆರ್ ಒಪ್ಪಂದ

ನವದೆಹಲಿ: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟ( ಎಂಟಿಸಿಆರ್)ಕ್ಕೆ ಭಾರತ ಸೇರ್ಪಡೆಗೊಂಡಿರುವುದು ಚೀನಾಕ್ಕೆ ಸವಾಲಾಗಬಹುದು ಎಂದು ಯೋಜನಾ ಚತುರರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕೂಟಕ್ಕೆ ಸೇರಿರುವುದರಿಂದ ಕಾನೂನು ಪ್ರಕಾರವಾಗಿ ಅತ್ಯಾಧುನಿಕ ಕ್ಷಿಪಣಿಗಳನ್ನು ಮಾರಾಟ ಮಾಡಬಹುದು, ಇಲ್ಲವೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಟ ಮಾಡಬಹುದು ಅದರಲ್ಲೂ ಮುಖ್ಯವಾಗಿ ಏಷ್ಯಾ ದೇಶಗಳಿಗೆ.

'' ಎಂಟಿಸಿಆರ್ ಒಪ್ಪಂದದಿಂದ ಭಾರತಕ್ಕೆ ಕ್ಷಿಪಣಿಗಳನ್ನು ಬಹಳ ವೇಗವಾಗಿ ಮತ್ತು ಕಾನೂನು ಪ್ರಕಾರವಾಗಿ ಮಾರಾಟ ಮಾಡುವ ಅವಕಾಶವಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ವಿಯೆಟ್ನಾಂಗೆ ಮಾರಾಟ ಮಾಡಬಹುದು ಎಂದು ಯೋಜನಾ ಸಂಶೋಧನೆ ಮತ್ತು ರಾಷ್ಟ್ರೀಯ ಭದ್ರತಾ ತಜ್ಞ ಕೇಂದ್ರದ ಸಂಶೋಧನೆ ಪ್ರೊಫೆಸರ್ ಭರತ್ ಕಾರ್ನಾಡ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬ್ರಹ್ಮೋಸ್ ಕ್ಷಿಪಣಿಯನ್ನು ವಿಯೆಟ್ನಾಂಗೆ ಮಾರಾಟ ಮಾಡುವ ಪ್ರಕ್ರಿಯೆಯನ್ನು ಭಾರತ ತ್ವರಿತವಾಗಿ ಮುಂದುವರಿಸಿದರೆ, ಭಾರತದ ಸಮುದ್ರದ ಮೇಲೆ ಕಣ್ಣಿಟ್ಟಿರುವ ಚೀನಾಕ್ಕೆ ಇದರಿಂದ ಹೊಡೆತ ಬೀಳಲಿದೆ ಎನ್ನುತ್ತಾರೆ ಅವರು.

ರಾಷ್ಟ್ರೀಯ ಭದ್ರತಾ ಗುಂಪು ಮತ್ತು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟಕ್ಕೆ ಸೇರ್ಪಡೆಯಾಗಲು ತೀವ್ರ ಪ್ರಯತ್ನ ನಡೆಸಿತ್ತು. ಆದರೆ ಎನ್ ಎಸ್ ಜಿ ಸೇರ್ಪಡೆಗೆ ಚೀನಾ ಅಡ್ಡಗಾಲು ಹಾಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com