ಭ್ರೂಣ ಲಿಂಗ ಪತ್ತೆ ಕುರಿತು ಜಾಹೀರಾತು: ಗೂಗಲ್, ಯಾಹೂ ವಿರುದ್ಧ ಸುಪ್ರೀಂ ಕಿಡಿ

ಭ್ರೂಣಲಿಂಗ ಪತ್ತೆ ಪರೀಕ್ಷೆ ಕುರಿತಂತೆ ಜಾಹೀರಾತು ನೀಡಿ ಕಾನೂನು ಉಲ್ಲಂಘಿಸುತ್ತಿರುವ ಸರ್ಚ್ ಇಂಜಿನ್ ಗಳಾದ ಗೂಗಲ್, ಯಾಹೂ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳ ವಿರುದ್ಧ...
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)

ನವದೆಹಲಿ: ಭ್ರೂಣಲಿಂಗ ಪತ್ತೆ ಪರೀಕ್ಷೆ ಕುರಿತಂತೆ ಜಾಹೀರಾತು ನೀಡಿ ಕಾನೂನು ಉಲ್ಲಂಘಿಸುತ್ತಿರುವ ಸರ್ಚ್ ಇಂಜಿನ್ ಗಳಾದ ಗೂಗಲ್, ಯಾಹೂ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಮಂಗಳವಾರ ಕಿಡಿಕಾರಿದೆ.

ಭ್ರೂಣ ಲಿಂಗ ಪತ್ತೆ ಕುರಿತಂತೆ ಸರ್ಚ್ ಇಂಜಿನ್ ಗಳಾದ ಗೂಗಲ್, ಯಾಹೂ ಹಾಗೂ ಇನ್ನಿತರೆ ಕಂಪನಿಗಳು ಜಾಹೀರಾತುಗಳನ್ನು ನೀಡುತ್ತಿದ್ದು, ಈ ಕುರಿತಂತೆ ಕೂಡಲೇ ಸುಪ್ರೀಂ ಮಧ್ಯೆ ಪ್ರವೇಶಿಸಬೇಕೆಂದು ಹೇಳಿದ ಸುಬು ಮ್ಯಾಥ್ಯೂ ಜಾರ್ಜ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ಸುಪ್ರೀಂ, ಸರ್ಚ್ ಇಂಜಿನ್ ಗಳಾದ ಗೂಗಲ್, ಯಾಹೂ ಹಾಗೂ ಮೈಕ್ರೋಸಾಫ್ಟ್ ಕಾರ್ಪೊರೇಷನ್ ವಿರುದ್ಧ ಕಿಡಿಕಾರಿದೆ.

ಸರ್ಚ್ ಇಂಜಿನ್ ಗಳು ಕಾನೂನು ಉಲ್ಲಂಘನೆ ಮಾಡುತ್ತಿರುವುದನ್ನು ಮುಂದುವರೆಸುತ್ತಲೇ ಇರುತ್ತದೆಯೇ? ಇಂತಹುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲವೇ? ಮಧ್ಯವರ್ತಿ ಹೆಸರಿನಲ್ಲಿ ಗೂಗಲ್, ಮೈಕ್ರೋಸಾಫ್ಟ್ ಹಾಗೂ ಯಾಹೂ ಕಂಪನಿಗಳು ಅಕ್ರಮ ಚಟುವಟಿಕೆ ನಡೆಸುವುದು ಸರಿಯಲ್ಲ. ಇಂತಹ ಬೆಳವಣಿಗೆಗಳನ್ನು ಮುಂದುವರೆಯಲು ಬಿಡಬಾರದು.

ಪ್ರಕರಣವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಬೇಕಿದ್ದು, ಅರ್ಜಿದಾರ ಹಾಗೂ ಸರ್ಜ್ ಇಂಜಿನ್ ಕಂಪನಿಗಳ ಮಾಲೀಕರೊಂದಿಗೆ ಕೇಂದ್ರ ಸಭೆ ನಡೆಸಬೇಕಿದೆ ಎಂದು ಹೇಳಿದೆ, ಅಲ್ಲದೆ, ಈ ಕುರಿತಂತೆ ಕೇಂದ್ರ ಶೀಘ್ರಗತಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಬೇಕಿದೆ ಎಂದು ಹೇಳಿರುವ ಸುಪ್ರೀಂ, ಈ ಕುರಿತ ವಿಚಾರಣೆಯನ್ನು ಜುಲೈ.25ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com