ಹೆಂಡತಿಯನ್ನು ತುಂಡು ತಂಡಾಗಿ ಕತ್ತರಿಸಿ, ಸೂಟ್ ಕೇಸ್ ಗೆ ತುಂಬಿದ ವ್ಯಾಪಾರಿ!

35 ವರ್ಷದ ವ್ಯಾಪಾರಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ಸೂಟ್ ಕೇಸ್ ನಲ್ಲಿಟ್ಟು, ಬೆಂಕಿ ಹಚ್ಚಿರುವ ಭಯಾನಕ ಘಟನೆ ಹೈದರಾಬಾದ್ ನಲ್ಲಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: 35 ವರ್ಷದ ವ್ಯಾಪಾರಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ಸೂಟ್ ಕೇಸ್ ನಲ್ಲಿಟ್ಟು, ಬೆಂಕಿ ಹಚ್ಚಿರುವ ಭಯಾನಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

35 ವರ್ಷದ ವ್ಯಾಪಾರಿರೂಪೇಶ್ ಕುಮಾರ್ ಪ್ರತಿನಿತ್ಯ ತನ್ನ ಜೊತೆ ಜಗಳ ಮಾಡುತ್ತಿದ್ದ ಹೆಂಡತಿಯನ್ನು ಕೊಂದಿದ್ದಾನೆ, ನಂತರ ಚೂರು ಚೂರುಗಳಾಗಿ ಕತ್ತರಿಸಿ, ಅದನ್ನು ದೊಡ್ಡ ಸೂಟ್ ಕೇಸ್ ನಲ್ಲಿ ತುಂಬಿ ಹೈದರಾಬಾದ್ ನ ಶಂಶಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮದನಪಲ್ಲಿ ಎಂಬ ಪ್ರದೇಶದಲ್ಲಿ ಬೆಂಕಿ ಹಚ್ಚಿದ್ದಾನೆ.

ತನ್ನ ಐದು ವರ್ಷದ ಮಗಳ ಜೊತೆ ವಾಪಸ್ ಬರುವಾಗ ರೂಪೇಶ್ ಕುಮಾರ್ ಅದೃಷ್ಠ ಕೈಕೊಟ್ಟಿತ್ತು. ರಸ್ತೆಯಲ್ಲಿದ್ದ ಬದಿಗೆ ಕಾರಿನ ಚಕ್ರ ಹೂತುಕೊಂಡಿತು. ಈ ವೇಳೆ ಸಹಾಯಕ್ಕಾಗಿ ರೂಪೇಶ್ ಸ್ಥಳೀಯರನ್ನು ಕರೆದಿದ್ದಾನೆ. ಕಾರಿನ ಹಿಂದಿನ ಭಾಗದಿಂದ ರಕ್ತದ ಕಲೆಗಳನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರ ವಿಚಾರಣೆ ವೇಳೆ ರೂಪೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com