ಢಾಕಾ ದಾಳಿ ಬಳಿಕ ಭಾರತದ ಮೇಲೆ ಇಸಿಸ್ ಕಣ್ಣು: ಗುಪ್ತಚರ ಇಲಾಖೆ ಎಚ್ಚರಿಕೆ

ಬಾಂಗ್ಲಾದೇಶದ ಢಾಕಾ ಮೇಲೆ ವಿಧ್ವಂಸಕ ಕೃತ್ಯವೆಸಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಉಗ್ರರು ಇದೀಗ ಭಾರತದ ಮೇಲೂ ಕೆಂಗೆಣ್ಣು ಬೀರಿದ್ದು, ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ...
ಇಸಿಸ್ ಉಗ್ರರು (ಸಂಗ್ರಹ ಚಿತ್ರ)
ಇಸಿಸ್ ಉಗ್ರರು (ಸಂಗ್ರಹ ಚಿತ್ರ)

ನವದೆಹಲಿ: ಬಾಂಗ್ಲಾದೇಶದ ಢಾಕಾ ಮೇಲೆ ವಿಧ್ವಂಸಕ ಕೃತ್ಯವೆಸಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಉಗ್ರರು ಇದೀಗ ಭಾರತದ ಮೇಲೂ ಕೆಂಗೆಣ್ಣು ಬೀರಿದ್ದು, ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ಡಾಕಾ ದಾಳಿ ಇಸಿಸ್ ಉಗ್ರರ ಬಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಇದು ಭಾರತದ ಮೇಲೆ ದಾಳಿ ಮಾಡಲು ಸಹಕಾರಿಯಾಗಲಿದೆ ಎಂಬ ಮಾಹಿತಿಯನ್ನು ಉಗ್ರರು ಬಹಿರಂಗಪಡಿಸಿದ್ದಾರೆ. ಭಾರತದ ಮೇಲೂ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆಂದು ಹೇಳಿರುವ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದ ಮೂಲದ ಜಮಾತ್-ಉಲ್-ಮುಜಾಹಿದ್ದೀನ್ ಉಗ್ರರ ಗುಂಪು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೀಡುಬಿಟ್ಟಿದ್ದು, ಈಗಾಗಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಗುಪ್ತಚರ ಇಲಾಖೆ ಮಾಹಿತಿಯನ್ವಯ ಈಗಾಗಲೇ ಪಶ್ಚಿಮಬಂಗಾಳದ ಅಧಿಕಾರಿಗಳು ನಾಲ್ವರು ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ವೇಳೆ ಬಂಧಿತರು ಇಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದು, ಜನನಿ ಬಿಡ ಪ್ರದೇಶಗಳು ಹಾಗೂ ದೇವಸ್ಥಾನಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com