ಇಸಿಸ್ ಸೇರಿದ್ದ ಕೇರಳ ಮೂಲದ ಶಂಕಿತನ ಬಂಧನ

ಕೇರಳ ರಾಜ್ಯದಿಂದ ನಾಪತ್ತೆಯಾಗಿ ಇಸಿಸ್ ಉಗ್ರಗಾಮಿ ಸಂಘಟನೆ ಸೇರಿದ್ದ ಯುವಕರ ಪೈಕಿ ಓರ್ವ ಶಂಕಿತ ಉಗ್ರನನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ...
ಇಸಿಸ್ ಶಂಕಿತ ಉಗ್ರನ ಬಂಧನ (ಸಂಗ್ರಹ ಚಿತ್ರ)
ಇಸಿಸ್ ಶಂಕಿತ ಉಗ್ರನ ಬಂಧನ (ಸಂಗ್ರಹ ಚಿತ್ರ)

ಮುಂಬೈ: ಕೇರಳ ರಾಜ್ಯದಿಂದ ನಾಪತ್ತೆಯಾಗಿ ಇಸಿಸ್ ಉಗ್ರಗಾಮಿ ಸಂಘಟನೆ ಸೇರಿದ್ದ ಯುವಕರ ಪೈಕಿ ಓರ್ವ ಶಂಕಿತ ಉಗ್ರನನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು  ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದ ಪಾಲಕ್ಕಾಡಿನಿ೦ದ ನಾಪತ್ತೆಯಾಗಿ ಐಸಿಸ್ ಸಂಘಟನೆ ಸೇರಿದ್ದಾರೆ ಎನ್ನಲಾದ 21 ಮ೦ದಿಯ ಪ್ಯೆಕಿ ಓರ್ವ ಶಂಕಿತ ಉಗ್ರನನ್ನು ಕೇ೦ದ್ರ ಗುಪ್ತಚರ ವಿಭಾಗ ಅಧಿಕಾರಿಗಳು ಬಂಧಿಸಿದ್ದಾರೆ.  ಶಂಕಿತ ಉಗ್ರನ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ  ಯುವಕನನ್ನು ಕೇರಳದ ಕಾಸರಗೋಡು ಜಿಲ್ಲೆಯ ತೃಕ್ಕರಿಪುರ ಇಳ೦ಬಚ್ಚಿ ನಿವಾಸಿ ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ.

ಪ್ರಸ್ತುತ ಅಧಿಕಾರಿಗಳು ಈತನ ವಿರುದ್ಧ ಸಮಗ್ರ ತನಿಖೆ ನಡೆಸುತ್ತಿದ್ದು, ಕೇರಳದಿಂದ ನಾಪತ್ತೆಯಾದ ಉಳಿದವರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ವಿಚಾರಣೆ ವೇಳೆ  ಬಂಧಿತ ಫಿರೋಜ್ ಖಾನ್, "ತನ್ನ ಜತೆಗಿದ್ದವರು ಸಿರಿಯಾಕ್ಕೆ ತೆರಳಿದ್ದು, ಈ ಮಾಹಿತಿ ಬಹಿರ೦ಗಪಡಿಸದ೦ತೆ ಕೆಲ ಸಮಯದ ಹಿ೦ದೆ ಈತ ಮನೆಯವರಿಗೆ ಸ೦ದೇಶ ರವಾನಿಸಿದ್ದ ಎಂದು  ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ತನಿಖಾ ತ೦ಡ ಈತನ ಮನೆಯವರಿ೦ದಲೂ ಮಾಹಿತಿ ಸ೦ಗ್ರಹಿಸಿದ್ದು, ಅದರ೦ತೆ ಮೊಬೈಲ್ ನೆಟ್ ವರ್ಕ್ ಜಾಲವನ್ನು ಹಿಡಿದು ತನಿಖೆ ಆರಂಭಿಸಿದ್ದಾರೆ.

ಕೇರಳದಿಂದ ನಿಗೂಢವಾಗಿ ನಾಪತ್ತೆಯಾಗಿರುವ 21 ಮ೦ದಿಯಲ್ಲಿ ಕಾಸರಗೋಡು ಜಿಲ್ಲೆಯ 11 ಮ೦ದಿ ಐಸಿಸ್ ಉಗ್ರಗಾಮಿ ಸಂಘಟನೆ ಸೇಪ೯ಡೆಗೊ೦ಡಿರುವ ಶ೦ಕೆ ಇದ್ದು, ಈ ಪೈಕಿ 12  ಮ೦ದಿ ಇರಾಕ್‍ನ ಟೆಹ್ರಾನ್‍ನಲ್ಲಿರುವ ಬಗ್ಗೆ ವಿದೇಶಾಂಗ ಇಲಾಖೆಯಿಂದ ಮಾಹಿತಿ ಲಭಿಸಿದೆ. ಇವರಲ್ಲಿ ಐವರಿಗೆ ಐಸಿಸ್‍ನೊ೦ದಿಗೆ ನೇರ ಸ೦ಪರ್ಕವಿದೆ ಎಂದು ತನಿಖಾ ತಂಡ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com