ಇಸಿಸ್ ಉಗ್ರಗಾಮಿ ಸಂಘಟನೆ ಸೇರಿದ ತಂಗಿ, ಅಣ್ಣ ಎನ್ ಎಸ್ ಜಿ ಯೋಧ

ಇತ್ತೀಚೆಗೆ ಕೇರಳದಲ್ಲಿ ನಾಪತ್ತೆಯಾದ ಯುವಕರು ಕುಖ್ಯಾತ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ...
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)

ತಿರುವನ೦ತಪುರ: ಇತ್ತೀಚೆಗೆ ಕೇರಳದಲ್ಲಿ ನಾಪತ್ತೆಯಾದ ಯುವಕರು ಕುಖ್ಯಾತ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ.

ವಿಶ್ವದ ಅತ್ಯಂತ ಕ್ರೂರ ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಕೇರಳ ಮೂಲದ 24 ವರ್ಷದ ಯುವತಿಯೊಬ್ಬಳು ಸೇರ್ಪಡೆಯಾಗಿದ್ದಾಳೆ. ಆದರೆ ವಿಚಿತ್ರವೆಂದರೆ ಇಸಿಸ್ ಸೇರಿದ ಯುವತಿಯ ಅಣ್ಣ ಭಾರತೀಯ ಸೇನೆಯ ಯೋಧನಾಗಿದ್ದು, ಪ್ರಸ್ತುತ ಎನ್ ಎಸ್ ಜಿ ಪಡೆಯಲ್ಲಿ ಉನ್ನತ ಹುದ್ದೆಯ ಸ್ಥಾನದಲ್ಲಿದ್ದಾನೆ.

ಕಳೆದ ತಿಂಗಳಿನಿಂದ ಕೇರಳದ ವಿವಿಧ ಜಿಲ್ಲೆಗಳಿಂದ ನಾಪತ್ತೆಯಾಗಿರುವ 21 ಮಂದಿ ಪೈಕಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಈ ನಿಮಿಷಾ ಎಂಬ ಯುವತಿ ಕೂಡ ಒಬ್ಬಳಾಗಿದ್ದು, ಸ್ವತಃ ಆಕೆಯ ತಾಯಿ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಅಲ್ಲದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಬಳಿ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಮಗಳು ತಮಗೆ  ವಾಪಸ್ ಬೇಕು ಎಂದು ಸಿಎಂ ಬಳಿ ನೋವು ತೋಡಿಕೊಂಡಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತಾಯಿ ಬಿಂದು ಕುಮಾರ್ ಅವರು, "ನನ್ನ ಮಗಳು ಧಾರ್ಮಿಕ ಹಿನ್ನಲೆಯುಳ್ಳವಳಾಗಿದ್ದಳು. ಅಲ್ಲದೆ ಇಬ್ಬರಲ್ಲೂ ದೇಶಭಕ್ತಿ ಮತ್ತು ಸ್ವಾಭಿಮಾನ  ಇತ್ತು. ನನ್ನ ಮಗ ಯೋಧನಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ನನ್ನ ಮಗಳು ವೈದ್ಯಕೀಯ ವಲಯ ಆರಿಸಿಕೊಂಡಳು. ಕಾಸರಗೋಡು ಜಿಲ್ಲೆಯ ದ೦ತ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿದ್ದ ಮಗಳು ಕಳೆದ ನವೆ೦ಬರ್ ನಿಂದ ಈಚೆಗೆ ದೂರವಾಣಿ ಕರೆ ಸ್ವೀಕರಿಸುವುದನ್ನು ನಿಲ್ಲಿಸಿಬಿಟ್ಟಿದ್ದಳು. ಇದರಿ೦ದ ಆತ೦ಕಕ್ಕೆ ಒಳಗಾಗಿ ಕಾಲೇಜಿನಲ್ಲಿ ವಿಚಾರಿಸಿದಾಗ  ಆಕೆ ತನ್ನ ಕ್ರಿಶ್ಚಿಯನ್ ಸ್ನೇಹಿತ ವಿನ್ಸೆಂಟ್‍ನನ್ನು ಮದುವೆಯಾಗಿ ಬಳಿಕ ಇಸ್ಲಾ೦ಗೆ ಮತಾ೦ತರಗೊ೦ಡು ಫಾತಿಮಾ ಎ೦ದು ಹೆಸರು ಬದಲಿಸಿಕೊ೦ಡಿರುವುದಾಗಿ ತಿಳಿಯಿತು.

ಇದಕ್ಕೆ ಮೊದಲು ಆಕ್ಷೇಪ ವ್ಯಕ್ತಪಡಿಸಿದರೂ ನ೦ತರ ನಾವು ಕುಟುಂಬದವರು ಒಪ್ಪಿಕೊ೦ಡಿದ್ದೆವು. ಕಳೆದ ಮೇ 16ರ೦ದು ಮನೆಗೆ ಬ೦ದ ಮೇಲೆ ಆಕೆ ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಳು.  ಶ್ರೀಲ೦ಕಾದ ಧಾಮಿ೯ಕ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿ ತೆರಳಿದ್ದ ಆಕೆ ಬಳಿಕ ನಮ್ಮ ಸಂಪರ್ಕಕ್ಕೇ ಸಿಗುತ್ತಿಲ್ಲ ಎಂದು ತಾಯಿ ಬಿಂದು ಕುಮಾರ್ ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಸೋಮವಾರ ತಿರುವನಂತಪುರದಲ್ಲಿ ಸಿಎಂ ಪಿಣರಾಯಿ ವಿಜಯನ್ ರನ್ನು ಭೇಟಿ ಮಾಡಿದ್ದ ಬಿಂದುಕುಮಾರ್ ಅವರು ತಮ್ಮ ಮಗಳು ಮನೆಗೆ ವಾಪಸ್ ಬರುವಂತೆ ಮಾಡಿ  ಎಂದು ಮನವಿ ಮಾಡಿಕೊಂಡಿದ್ದಾರೆ. "ಮು೦ದಿನ ತಿ೦ಗಳು ನನ್ನ ಮಗಳಿಗೆ 24 ವಷ೯ ತು೦ಬಲಿದ್ದು, ಅವಳು ಮತ್ತೆ ದೇಶಕ್ಕೆ ಮರಳಿ ಬರಲಿ ಎ೦ದು ದೇವರಲ್ಲಿ ಪ್ರಾಥಿ೯ಸುತ್ತೇನೆ" ಎ೦ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com