ನಾವು ಉಗ್ರರರಲ್ಲ: ಕುಟುಂಬಸ್ಥರಿಗೆ ಸಂದೇಶ ರವಾನಿಸಿದ ಕೇರಳ ಶಂಕಿತರು

ನಾವು ಉಗ್ರರಲ್ಲ, ನಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಕೇರಳದಲ್ಲಿ ನಾಪತ್ತೆಯಾಗಿರುವ 20 ಯುವಕರ ಪೈಕಿ ಇಬ್ಬರು ಶಂಕಿತರು ತಮ್ಮ ಕುಟುಂಬಸ್ಥರಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ನಾವು ಉಗ್ರರಲ್ಲ, ನಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಕೇರಳದಲ್ಲಿ ನಾಪತ್ತೆಯಾಗಿರುವ 20 ಯುವಕರ ಪೈಕಿ ಇಬ್ಬರು ಶಂಕಿತರು ತಮ್ಮ ಕುಟುಂಬಸ್ಥರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಕೇರಳದಲ್ಲಿ ಓರ್ವ ಮಹಿಳೆ ಸೇರಿದಂತೆ 20 ಯುವಕರು ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿತ್ತು. ಈ ಯುವಕರು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಗೆ ಸೇರಿರುವ ಶಂಕೆಗಳು ವ್ಯಕ್ತವಾಗಿತ್ತು.

ಇದರಂತೆ 20 ಯುವಕರ ಪೈಕಿ ಇಬ್ಬರು ಶಂಕಿತರು ತಮ್ಮ ಕುಟುಂಬಸ್ಥರಿಗೆ ಧ್ವನಿ ಸಂದೇಶವೊಂದನ್ನು ರವಾನಿಸಿರುವುದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ನಾಪತ್ತೆಯಾದ 20 ಯುವಕರ ಪೈಕಿ ಇಬ್ಬರು ಯುವಕರು ತಮ್ಮ ಕುಟುಂಬಕ್ಕೆ ಧ್ವನಿ ಸಂದೇಶವನ್ನು ರವಾನಿಸಿದ್ದು, ನಾವು ಉಗ್ರರಲ್ಲ. ಯಾವುದೇ ಕೆಟ್ಟ ಕೆಲಸವನ್ನು ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆಂದು ವರದಿ ಮಾಡಿದೆ.

ಧ್ವನಿ ಸಂದೇಶದಲ್ಲಿ ಕುಟುಂಬಸ್ಥರಿಗೆ ಉಗ್ರರಲ್ಲ ಎಂಬ ಭರವಸೆಯ ಮಾತುಗಳನ್ನು ಹೇಳಿರುವ ಯುವಕರು ತಾವು ಎಲ್ಲಿದ್ದೇವೆ ಎಂಬ ಮಾಹಿತಿಯನ್ನು ಮಾತ್ರ ಹೇಳಿಕೊಂಡಿಲ್ಲ. ನಾವು ಸುರಕ್ಷಿತರಾಗಿದ್ದೇವೆ. ಯಾವುದೇ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಿನ್ನೆಯಷ್ಟೇ ರಾಷ್ಟ್ರೀಯ ತನಿಖಾ ದಳ ಕಾಣೆಯಾಗಿರುವ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ತನಿಖೆ ನಡೆಸಿದ್ದರು. ಅಲ್ಲದೆ, ಯುವಕರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪರಿಶೀಲನೆ ನಡೆಸಿದ್ದರು. ಇದರಂತೆ ಕಾಸರಗೋಡು ಮೂಲದ ಫೆರೋಜ್ ಎಂಬ ಯುವಕನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.

ಫೆರೋಜ್ ಕಾಸರಗೋಡು ಮೂಲದವನಾಗಿದ್ದು, ಪ್ರಸ್ತುತ ಆತ ಮುಂಬೈನಲ್ಲಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಇಸಿಸ್ ಉಗ್ರ ಸಂಘಟನೆ ಸೇರ್ಪಡೆಗೊಳ್ಳಲಿದ್ದಾನೆಂದು ಹೇಳಿದ್ದರು. ಇದಲ್ಲದೆ, ನಾಪತ್ತೆಯಾಗಿರುವ 20 ಮಂದಿಯ ಪೈಕಿ 2-3 ಯುವಕರು ಈಗಾಗಲೇ ಸಿರಿಯಾ ತಲುಪಿದ್ದಾರೆಂದು ಹೇಳಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com