ಗೋದ್ರಾ ರೈಲು ಹತ್ಯಾಕಾಂಡ: ಆರೋಪಿ ಇಮ್ರಾನ್ ಬಟುಕ್ ಬಂಧನ

2002ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಆರೋಪಿ ಇಮ್ರಾನ್ ಬಟುಕ್' ಎಂಬುವವನನ್ನು ಅಹ್ಮದಾಬಾದ್ ಅಪರಾಧ ವಿಭಾಗದ ಪೊಲೀಸರು...
ಗೋದ್ರಾ ರೈಲು ಹತ್ಯಾಕಾಂಡ (ಸಂಗ್ರಹ ಚಿತ್ರ)
ಗೋದ್ರಾ ರೈಲು ಹತ್ಯಾಕಾಂಡ (ಸಂಗ್ರಹ ಚಿತ್ರ)

ಮಲೆಗಾಂವ್: 2002ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಆರೋಪಿ ಇಮ್ರಾನ್ ಬಟುಕ್' ಎಂಬುವವನನ್ನು ಅಹ್ಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಎಟಿಎಸ್ ಮತ್ತು ಅಹ್ಮದಾಬಾದ್ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಇದರಂತೆ ಆರೋಪಿ ಇಮ್ರಾನ್ ಬಟುಕ್ ನನ್ನು ಮಹಾರಾಷ್ಟ್ರದ ಮಲೆಗಾಂವ್ ನಲ್ಲಿ ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.

ಗೋದ್ರಾ ಹತ್ಯಾಕಾಂಡ ಪ್ರಕರಣ ಸಂಬಂಧ ಗುಜರಾತ್ ಭಯೋತ್ರದನಾ ವಿರೋಧಿ ತಂಡ ಮೇ.18 ರಂದು ಪ್ರಕರಣದ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿದ್ದ ಫರೂಕ್ ಭನ ಎಂಬುವವನನ್ನು ಬಂಧನಕ್ಕೊಳಪಡಿಸಿದ್ದರು. ಆರೋಪಿ ಭನಾ ಗೋದ್ರಾದಲ್ಲಿ ಕಾರ್ಪೋರೇಟರ್ ಆಗಿದ್ದ. ಘಟನೆ ನಡೆದ ನಂತರ ಮುಂಬೈ ನಲ್ಲಿ ತಲೆಮರೆಸಿಕೊಂಡಿದ್ದ. ಇದರಂತೆ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಫರೂಕ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

2002ರ ಫೆ.27 ರಂದು ಗೋದ್ರಾ ಬಳಿ ಸಾಬರ್ ಮತಿ ಎಕ್ಸ್ ಪ್ರೆಸ್ ರೈಲಿಗೆ ದುಷ್ಕರ್ಮಿಗಳ ಗುಂಪೊಂದು ಬೆಂಕಿ ಹಚ್ಚಿತ್ತು. ಪರಿಣಾಮ ರೈಲಿನಲ್ಲಿದ್ದ 59 ಮಂದಿ ಜೀವಂತವಾಗಿ ದಹನವಾಗಿದ್ದರು. ಈ ಪ್ರಕರಣ ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿತ್ತು. ಗಲಭೆಯಲ್ಲಿ 1000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com