ಮುಂಬೈ: ಭೀವಂಡಿ ರೈಲು ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ರೈಲಿಗಾಗಿ ಕಾಯುತ್ತಾ ನಿಂತಿದ್ದ ವೇಳೆ ನಿಲ್ದಾಣಕ್ಕೆ ಬಂದ ರೈಲಿಗೆ ಯುವಕನೊಬ್ಬ ಅಡ್ಡ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ರೈಲು ನಿಲ್ದಾಣದಲ್ಲಿ ಇತರ ಪ್ರಯಾಣಿಕರಂತೆ ರೈಲಿಗಾಗಿ ಕಾಯುತ್ತಾ ನಿಂತಿದ್ದ ಯುವಕನೊಬ್ಬ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಕೆಳಗೆ ಜಿಗಿದು ಹಳಿ ಮೇಲೆ ಮಲಗಿದ್ದಾನೆ. ಕೂಡಲೇ ರೈಲು ಆತನ ಮೇಲೆ ಹರಿದಿದ್ದು, ದೇಹ ಛಿದ್ರವಾಗಿದ್ದು ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂತರ ಭೀಕರ ಘಟನೆ ಕಣ್ಣ ಮುಂದೆ ನಡೆಯುತ್ತಿದ್ದಂತೆ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.