ಏರ್ ಏಷ್ಯಾದಿಂದ "ಕಬಾಲಿ" ದೋಖಾ; ಅಭಿಮಾನಿಗಳಿಂದ ವ್ಯಾಪಕ ಪ್ರತಿಭಟನೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕಬಾಲಿ" ತೋರಿಸುವುದಾಗಿ ಹೇಳಿ ಏರ್ ಏಷ್ಯಾ ವಿಮಾನ ಸಂಸ್ಥೆ ಮೋಸ ಮಾಡಿದೆ ಆರೋಪಿಸಿ ಚೆನ್ನೈನಲ್ಲಿ ನೂರಾರು ಅಭಿಮಾನಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಸಂತೋಷ್ ಚಿತ್ರಮಂದಿರದೆದುರು ನೆರೆದಿರುವ ಅಭಿಮಾನಿಗಳು (ಟ್ವಿಟರ್ ಚಿತ್ರ)
ಸಂತೋಷ್ ಚಿತ್ರಮಂದಿರದೆದುರು ನೆರೆದಿರುವ ಅಭಿಮಾನಿಗಳು (ಟ್ವಿಟರ್ ಚಿತ್ರ)

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕಬಾಲಿ" ತೋರಿಸುವುದಾಗಿ ಹೇಳಿ ಏರ್ ಏಷ್ಯಾ ವಿಮಾನ ಸಂಸ್ಥೆ ಮೋಸ ಮಾಡಿದೆ ಆರೋಪಿಸಿ ಚೆನ್ನೈನಲ್ಲಿ ನೂರಾರು  ಅಭಿಮಾನಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಕಬಾಲಿ ಚಿತ್ರದ ಅಧಿಕೃತ ಏರ್ ಲೈನ್ ಪಾರ್ಟ್ನರ್ ಕೂಡ ಆಗಿರುವ ಅಗ್ಗದ ವಿಮಾನಯಾನ ಸಂಸ್ಥೆ ಏರ್ ಏಷ್ಯಾ ಈ ಹಿಂದೆ ಬೆಂಗಳೂರಿನಿಂದ ಚೆನ್ನೈಗೆ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಏರ್  ಏಷ್ಯಾ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ಆಫರ್ ನೀಡಿತ್ತು. ಅದರಂತೆ ಈ ಪ್ರಯಾಣಿಕರು 8000 ರು.ಗಳ ಪ್ಯಾಕೇಜ್ ಖರೀದಿಸಿದರೆ ವಿಮಾನ ಪ್ರಯಾಣದೊಂದಿಗೆ ಊಟ  ಮತ್ತು ಕಬಾಲಿ ಚಿತ್ರ ವೀಕ್ಷಿಸುವ ಅವಕಾಶ ನೀಡುವುದಾಗಿ ಹೇಳಿತ್ತು. ಕಬಾಲಿ ಚಿತ್ರವನ್ನು ಚೆನ್ನೈನ ಸತ್ಯಂ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವುದಾಗಿ ಹೇಳಿತ್ತು.

ಆದರೆ ಕೊನೇ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿ ವಡಪಳನಿಯಲ್ಲಿರುವ ಪ್ರಸಾದ್ ಸ್ಟುಡಿಯೋಗೆ ಚಿತ್ರ ಪ್ರದರ್ಶನವನ್ನು ಸ್ಥಳಾಂತರಿಸಿತು. ಸತ್ಯಂ ಚಿತ್ರಮಂದಿರದಲ್ಲಿಯೇ ಕಬಾಲಿ ಚಿತ್ರ  ಪ್ರದರ್ಶನವಾಗುತ್ತದೆ ಎಂದು ನಂಬಿ ಆಗಮಿಸಿದ್ದ ನೂರಾರು ಪ್ರೇಕ್ಷಕರಿಗೆ ಅಂತಿಮ ಕ್ಷಣದಲ್ಲಿ ಈ ವಿಚಾರ ತಿಳಿಸಿದ್ದರಿಂದ ಅವರು ವಡಪಳನಿಗೆ ತೆರಳಲಾಗಲಿಲ್ಲ. ಹೀಗಾಗಿ ಕಬಾಲಿ ಚಿತ್ರ  ವೀಕ್ಷಣೆಯಿಂದ ವಂಚಿತರಾಗಿದ್ದಾರೆ.

ಇದೇ ಕಾರಣಕ್ಕೆ ವಿಮಾನಯಾನ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, "ಏರ್ ಏಷ್ಯಾ ಡೌನ್ ಡೌನ್" ಎಂದು ಕೂಗುತ್ತಿದ್ದಾರೆ.

"ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿರುವುದಕ್ಕೆ ಏರ್ ಏಷ್ಯಾ ಸಿಇಒ ಅಮರ್ ಅಬ್ರೋಲ್, "ಇದೊಂದು ದುರದೃಷ್ಟಕರ ಘಟನೆ, ಈ ಬಗ್ಗೆ ನಾನು ಕ್ಷಮೆ ಯಾಚಿಸಿ ಸಂಪೂರ್ಣ ಹೊಣೆ ಹೊತ್ತುಕೊಳ್ಳುತ್ತೇನೆ. ಸತ್ಯಂ ಸಿನಿಮಾದಲ್ಲಿ ಬೆಳಿಗ್ಗೆ 9 ಕ್ಕೆ ನಿಗದಿಯಾಗಿದ್ದ ವಿಶೇಷ ಪ್ರದರ್ಶನ ಸಾಧ್ಯವಾಗುವುದಿಲ್ಲ ಎಂದು ಪ್ರೊಡಕ್ಷನ್ ಹೌಸ್ ನಮಗೆ ರಾತ್ರಿ 2 ಗಂಟೆಯಲ್ಲಿ ಮಾಹಿತಿ ಬಂತು. ಆದ್ದರಿಂದ 12:20 ಕ್ಕೆ ಸತ್ಯಂ ಸಿನಿಮಾದಲ್ಲಿ ಪ್ರದರ್ಶನ ಆಯೋಜಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com