ಬಿಜೆಪಿಯೊಂದಿಗಿನ ಮೈತ್ರಿಯ ಅವಧಿಯಲ್ಲಿ ಶಿವಸೇನೆ ನಶಿಸಿ ಹೋಗಿದೆ: ಉದ್ಧವ್ ಠಾಕ್ರೆ

ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ 25 ವರ್ಷಗಳ ಮೈತ್ರಿಯಲ್ಲಿ ಶಿವಸೇನೆ ನಶಿಸಿ ಹೋಗಿದೆ ಎಂದು ಶಿವಸೇನೆ ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on: 

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ 25 ವರ್ಷಗಳ ಮೈತ್ರಿಯಲ್ಲಿ ಶಿವಸೇನೆ ನಶಿಸಿ ಹೋಗಿದೆ ಎಂದು ಶಿವಸೇನೆ ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆ 25 ವರ್ಷಗಳ ಕಾಲ ಬಿಜೆಪಿ ಜೊತೆಯಲ್ಲೇ ಸಾಗಿದೆ, ನಮ್ಮದೇ ಸ್ವಂತ ಶಕ್ತಿ ಮೂಲಕ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಬಹುದಿತ್ತು, ಆದರೆ ಬಿಜೆಪಿಯೊಂದಿಗಿನ ಮೈತ್ರಿಯ ಅವಧಿಯಲ್ಲಿ ಶಿವಸೇನೆ ಸಾಕಷ್ಟು ನಾಶಗೊಂಡಿದೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.  25 ವರ್ಷಗಳ ಹಿಂದೆ ಮೈತ್ರಿಯ ಅಗತ್ಯವಿತ್ತು, ಆದರೆ ಶಿವಸೇನೆ ಸ್ವತಂತ್ರವಾಗಿದ್ದಿದ್ದರೆ, ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಸಾಮ್ನಾದಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ಉದ್ಧವ್ ಠಾಕ್ರೆ, ರಾಜ್ಯದ ಎಲ್ಲಾ ಪ್ರಮುಖ ನಾಯಕರು ಹಾಗು ಜನಸಮೂಹ ಶಿವ ಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಅವರೊಂದಿಗಿತ್ತು. ಹೀಗಿದ್ದರೂ 25 ವರ್ಷಗಳ ಕಾಲ ಬಿಜೆಪಿ ಮೈತ್ರಿಯಲ್ಲೇ ಕೊಳೆಯಬೇಕಾಯಿತು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com