ಭಾರತದಲ್ಲಿರುವ ಪ್ರತೀ 4 ಭಿಕ್ಷುಕರ ಪೈಕಿ ಓರ್ವ ಮುಸ್ಲಿಂ!

ದೇಶದಲ್ಲಿ ಮುಸ್ಲಿಂರ ಜನಸಂಖ್ಯೆ ಹೆಚ್ಚಳದಂತೆ ಭಿಕ್ಷುಕರ ಸಂಖ್ಯೆಯಲ್ಲೂ ಕೂಡ ಗಣನೀಯ ಏರಿಕೆ ಕಂಡಿದೆ...
ಭಿಕ್ಷುಕರು
ಭಿಕ್ಷುಕರು

ನವದೆಹಲಿ: ದೇಶದಲ್ಲಿ ಮುಸ್ಲಿಂರ ಜನಸಂಖ್ಯೆ ಹೆಚ್ಚಳದಂತೆ ಭಿಕ್ಷುಕರ ಸಂಖ್ಯೆಯಲ್ಲೂ ಕೂಡ ಗಣನೀಯ ಏರಿಕೆ ಕಂಡಿದೆ.

ಭಾರತ ಸರ್ಕಾರದ 2011ರ ಜನಗಣತಿ ಪ್ರಕಾರ ಒಟ್ಟು ಭಿಕ್ಷುಕರಲ್ಲಿ ಶೇ. 24.9ರಷ್ಟು ಜನ ಮುಸ್ಲಿಂರಾಗಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. ಇನ್ನು ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಹಿಂದುಗಳು ಪ್ರಮಾಣ ಶೇ.79.8 ಇದ್ದು, ಮುಸ್ಲಿಂರ ಪ್ರಮಾಣ ಶೇ. 14.73ರಷ್ಟಿದೆ. ಆದರೆ ಒಟ್ಟು ಭಿಕ್ಷುಕರಲ್ಲಿ ಮುಸ್ಲಿಂರ ಪ್ರಮಾಣ ಶೇ. 25ರಷ್ಟಿದೆ ಎಂದು ಜನಗಣತಿ ಮಾಹಿತಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಒಟ್ಟು 3.7 ಲಕ್ಷ ಭಿಕ್ಷುಕರಿದ್ದಾರೆ. ಇವರಲ್ಲಿ ಮುಸ್ಲಿಂರು 92,760 ಮಂದಿ ಇದ್ದಾರೆ. ಇನ್ನು 2.68 ಲಕ್ಷ ಹಿಂದು ಭಿಕ್ಷುಕರಿದ್ದಾರೆ. ಎಲ್ಲಾ ಧರ್ಮದಲ್ಲೂ ಮಹಿಳೆಯರಿಗಿಂತ ಪುರುಷ ಭಿಕ್ಷುಕರ ಸಂಖ್ಯೆ ಹೆಚ್ಚಿದ್ದರೆ, ಮುಸ್ಲಿಂರಲ್ಲಿ ಪುರುಷರಿಗಿಂತ ಮಹಿಳಾ ಭಿಕ್ಷುಕರ ಸಂಖ್ಯೆ ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com