'ತ್ರಿವಳಿ ತಲಾಖ್' ನಿರ್ಮೂಲನಾ ಹೋರಾಟಕ್ಕೆ ಶಿವಸೇನೆ ಬೆಂಬಲ

ಮುಸ್ಲಿಮರಲ್ಲೇ ಬಹು ಚರ್ಚಿಗೆ ಒಳಗಾಗಿರುವ ತ್ರಿವಳಿ ತಲಾಖ್ ವ್ಯವಸ್ಥೆ ನಿರ್ಮೂಲನೆ ಹೋರಾಟಕ್ಕೆ ಶಿವಸೇನೆ ಗುರುವಾರ ಬೆಂಬಲ ವ್ಯಕ್ತಪಡಿಸಿದೆ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on

ನವದೆಹಲಿ: ಮುಸ್ಲಿಮರಲ್ಲೇ ಬಹು ಚರ್ಚಿಗೆ ಒಳಗಾಗಿರುವ ತ್ರಿವಳಿ ತಲಾಖ್ ವ್ಯವಸ್ಥೆ ನಿರ್ಮೂಲನೆ ಹೋರಾಟಕ್ಕೆ ಶಿವಸೇನೆ ಗುರುವಾರ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತಂತೆ ತನ್ನ ಮುಖಪುಟ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಿವಸೇನೆಯು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಇನ್ನಿತರೆ ಸಂಘಗಳು ತ್ರಿವಳಿ ತಲಾಖ್ ಸಂಸ್ಕೃತಿಗೆ ಬದಲಾವಣೆ ತರಲು ಕಳೆದ ವರ್ಷ ವಿರೋಧ ವ್ಯಕ್ತಪಡಿಸಿತ್ತು. ಒಬ್ಬ ಮುಸ್ಲಿಂ ಮಹಿಳೆ ನ್ಯಾಯ ಪಡೆಯುವುದು ಎಷ್ಟು ಕಷ್ಟವಿದೆ ಎಂಬುದನ್ನು ಅವರ ಸಂಪ್ರದಾಯವೇ ವಿವರಿಸುತ್ತದೆ ಎಂದು ಹೇಳಿದೆ.

ಅಲ್ಲದೆ, ಜಾತ್ಯತೀತ ಜನರ ವಿರುದ್ಧ ಕಿಡಿಕಾಡಿರುವ ಸೇನೆಯು, ಹಿಂದೂ ಸಂಪ್ರದಾಯಗಳ ಬಗ್ಗೆ ಧನೆಯೆತ್ತುತ್ತಿದ್ದ ಜನರು ತ್ರಿವಳಿ ತಲಾಖ್ ವಿಚಾರದಲ್ಲೇಕೆ ಮೌನವಹಿಸಿ ಸುಮ್ಮನೆ ಕುಳಿತುಕೊಂಡಿದೆ ಎಂದು ಪ್ರಶ್ನಿಸಿದೆ. ಇತರೆ ವಿಚಾರಗಳ ಬಗ್ಗೆ ಧನಿಯೆತ್ತುತ್ತಿದ್ದವರು, ತ್ರಿವಳಿ ತಲಾಖ್ ಸಂಪ್ರದಾಯದ ಬಗ್ಗೆ ಮಾತನಾಡಲು ಸಿದ್ಧರಿಲ್ಲ ಎಂದು ಹೇಳಿದೆ.

ಗುವಾಹಟಿಯ ಶಮೀನಾ ಯಾಸ್ಮಿನ್ ಹಾಗೂ ಶಮಿಮಾ ಫರೂಕಿ, ಸೈರಾ ಬಾನು (ಸುಪ್ರೀಂ ನಲ್ಲಿ ತ್ರಿವಳಿ ತಲಾಖ್ ಬಗ್ಗೆ ಪ್ರಶ್ನೆಯೆತ್ತಿದ್ದವರು) ಅವರು ಇಂದಿಗೂ ತ್ರಿವಳಿ ತಲಾಖ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.  ತ್ರಿವಳಿ ತಲಾಖ್ ಕುರಿತು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ)ಗೆ ಭಾರತದಿಂದ ಬೆಂಬಲವನ್ನು ಪಡೆಯುತ್ತಿದೆ.

ಮುಸ್ಲಿಂ ಮಹಿಳೆಯರ ದನಿಯನ್ನು ಕುಗ್ಗಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುತ್ತದೆ.     ಆದರೆ, ಅಂತಹ ಪ್ರಯತ್ನಗಳು ಯಶಸ್ವಿಯಾಗಲು ಬಿಡಬಾರದು. ಪ್ರತೀ ಹಂತದಲ್ಲಿ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಗಟ್ಟಿಮಾಡಬೇಕು. ಇಲ್ಲದೇ ಹೋದಲ್ಲಿ ಮುಸ್ಲಿಂ ಮಹಿಳೆಯರು ಮುಂಬರುವ ಬೆಳಕನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ಏನಿದು ಪ್ರಕರಣ...?
ಸೇನೆಯಲ್ಲಿ ಕೆಲಸ ಮಾಡುತ್ತಿರುವ ಲ್ಯಾನ್ಸ್ ನಾಯಕ್ ಮೊಹಮ್ಮದ್ ಫರೂರ್ ಎಂಬುವವರ ವೇತನದಿಂದ ಹಣ ಮುರಿದುಕೊಳ್ಳುತ್ತಿದ್ದ ಸೇನೆಯು ಈ ಹಣವನ್ನು ಆತನ ಪತ್ನಿಗೆ ಜೀವನಾಂಶವಾಗಿ ನೀಡುತ್ತಿತ್ತು. ಹೀಗಾಗಿ ಅಸಮಾಧಾನಗೊಂಡ ಫರೂರ್ ಅವರು ಇದನ್ನು ಸೇನಾ ನ್ಯಾಯಾಧೀಕರಣದಲ್ಲಿ ಪ್ರಶ್ನಿಸಿದ್ದರು.

ಕಾನೂನು ಬದ್ಧವಾಗಿ ವಿವಾಹವಾದವರಿಗೆ ಮಾತ್ರವೇ ಜೀವನಾಂಶ ನೀಡಬಹುದಾಗಿದೆ. ತಾನು ಈಗಾಗಲೇ ಪತ್ನಿಗೆ ವಿಚ್ಛೇದನವನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಆಕೆ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ವಾದಿಸಿದ್ದರು.

ಆದರೆ, ಫರೂರ್ ನ ಈ ವಾದವನ್ನು ತಿರಸ್ಕರಿಸಿದ್ದ ಸೇನಾ ನ್ಯಾಯಾಧೀಕರಣದ ಲಕ್ನೋ ಪೀಠ, ಫರೂರ್ ಏಕಪಕ್ಷೀಯವಾಗಿ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಚೇದನ ನೀಡಿದ್ದು, ಕಾನೂನು ಇದು ಕಾನೂನು ಮಾನ್ಯವಲ್ಲ.

ಮುಸ್ಲಿಂ ವೈಯಕ್ತಿಕ ಕಾನೂನಿನ ಹೆಸರು ಬಳಸಿಕೊಂಡು ಪತ್ನಿಯ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗದು. ಕುರಾನ್ ಕೂಡಾ ಎಲ್ಲಿಯೂ ಮೂರು ಬಾರಿ ತಲಾಖ್ ಹೇಳಿದರೆ ವಿಚ್ಛೇದನ ನೀಡಬೇಕು ಎಂದು ಪ್ರತಿಪಾದಿಸಿಲ್ಲ. ಜೊತೆಗೆ ಮುಸ್ಲಿಂ ವೈಯಕ್ತಿಕ ಕಾನೂನಿನ ಅನ್ವಯವೂ ಇದು ಸಿಂಧುವಲ್ಲ. ಕುರಾನ್ನ ಯಾವುದೇ ಒಂದು ಭಾಗವನ್ನು ಓದಿಕೊಂಡು ವಿಚ್ಛೇದನವನ್ನು ವ್ಯಾಖ್ಯಾನಿಸುವುದು ಸರಿಯಲ್ಲ. ಅದನ್ನು ಆರಂಭದಿಂದ ಅಂತ್ಯದವರೆಗೆ ಓದಿದರೆ ಮಾತ್ರವೇ ಅದು ಏನನ್ನು ಹೇಳುತ್ತದೆ ಎಂಬುದನ್ನು ಅರಿಯಲು ಸಾಧ್ಯ ಎಂದು ಹೇಳಿತ್ತು.

ಪುರುಷ ಮತ್ತು ಮಹಿಳೆ ಪರಸ್ಪರ ಒಪ್ಪಿಕೊಂಡಾಗ ಮಾತ್ರವೇ ನಿಖಾ ನಡೆಯುತ್ತದೆ. ಅದೇ ರೀತಿಯಲ್ಲಿ ಪರಸ್ಪರರು ಒಪ್ಪಿಕೊಂಡಾಗ ಮಾತ್ರವೇ ವಿಚ್ಛೇದನ ಸಾಧ್ಯವಾಗುತ್ತದೆ. ಪತ್ನಿಯ ಸಮ್ಮುಖದಲ್ಲಿ ಮಾತ್ರವೇ ವಿಚ್ಚೇದನ ನೀಡಬಹುದು ಎಂದು ಸ್ಪಷ್ಟಪಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com