ದಾಬೋಲ್ಕರ್ ಹತ್ಯೆ ಪ್ರಕರಣ: 3 ವರ್ಷದ ಬಳಿಕ ಮೊದಲ ಆರೋಪಿ ಬಂಧನ

ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ಮೂರು ವರ್ಷ ಕಳೆದ ಬಳಿಕ ಇದೀಗ ಮೊದಲ ಆರೋಪಿಯೊಬ್ಬನನ್ನು ಸಿಬಿಐ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ಮೂರು ವರ್ಷ ಕಳೆದ ಬಳಿಕ ಇದೀಗ ಮೊದಲ ಆರೋಪಿಯೊಬ್ಬನನ್ನು ಸಿಬಿಐ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.

ಸನಾತನ ಸಂಸ್ಥೆಯ ಸದಸ್ಯ ಡಾ.ವೀರೇಂದ್ರ ತಾವಡೆ ಬಂಧಿತ ಆರೋಪಿಯಾಗಿದ್ದು, 2013ರಲ್ಲಿ ಪುಣೆಯಲ್ಲಿ ನಡೆದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಇವರ ಪಾತ್ರವಿದೆ ಎಂದು ಶಂಕಿಸಲಾಗಿದೆ.

ವಿರೇಂದ್ರ ತಾವಡೆಯವರು ಮುಂಬೈನ ಇ.ಎನ್.ಟಿ ತಜ್ಞರಾಗಿದ್ದು, ಸನಾತನ ಸಂಸ್ಥೆಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, 2009ರಲ್ಲಿ ಗೋವಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಸಾರಂಗ್ ಅಕೋಲ್ಕರ್ ಜೊತೆಗೆ ನಿಕಟ ಸಂಪರ್ಕ ಹೊಂದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ದಾಬೋಲ್ಕರ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ತಾವಡೆ ಸಾರಂಗ್ ಜೊತೆಗೆ ಇಮೇಲ್ ನಲ್ಲಿ ಸಂಪರ್ಕದಲ್ಲಿರುವುದಾಗಿ ತಿಳಿದುಬಂದಿದೆ.

ಕೆಲವು ದಿನಗಳ ಹಿಂದಷ್ಟೇ ಸಿಸಿಬಿ ಪೊಲೀಸರು ತಾವಡೆ ಅವರ ಮನೆ ಮೇಲೆ ನಡೆಸಿದ್ದರು. ಇದರಂತೆ ವಿಚಾರಣೆ ನಡೆಸಿದಾಗ ಹಲವು ಅನುಮಾನಗಳು ಮೂಡಿದ್ದವು.

2013ರ ಆಗಸ್ಟ್ 20 ರಂದು ನರೇಂದ್ರ ದಾಬೋಲ್ಕರ್ ಅವರನ್ನು ಅಮಾನವೀಯವಾಗಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಬಾಂಬೆ ಹೈ ಕೋರ್ಟ್ ಆದೇಶದಂತೆ ಸಿಬಿಐ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದರು.

ದಾಬೋಲ್ಕರ್ ಹತ್ಯೆಯಾಗಿ 3 ಮೂರ್ಷ ಕಳೆದರೂ ಸಾವಿನ ನಿಗೂಢ ಮಾತ್ರ ಭೇದಿಸಲು ಸಾಧ್ಯವಾಗಿರಲಿಲ್ಲ. ಇದರಂತೆ ದಾಬೋಲ್ಕರ್ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವೈದ್ಯ ವೀರೇಂದ್ರ ತಾವಡೆ ಅವರನ್ನು ಬಂಧನಕ್ಕೊಪಡಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ತಾವಡೆ ಅವರನ್ನು ಶುಕ್ರವಾರ ಸಂಜೆ ಬಂಧನಕ್ಕೊಳಪಡಿಸಿರುವ ಸಿಬಿಐ ಅಧಿಕಾರಿಗಳು ಇಂದು ಪುಣೆ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com