ಲೈಂಗಿಕ ಕಾರ್ಯಕರ್ತರು, ಹೆಚ್ಐವಿ ರೋಗಿಗಳಿಗೆ ರು.2ಗೆ 1 ಕೆ.ಜಿ ಅಕ್ಕಿ: ದೀದಿ ಸರ್ಕಾರದ ಹೊಸ ಘೋಷಣೆ

ಲೈಂಗಿಕ ಕಾರ್ಯಕರ್ತರು ಹಾಗೂ ಹೆಚ್ಐವಿ ಪೀಡಿತ ರೋಗಿಗಳ ಕುರಿತಂತೆ ಕಾಳಜಿ ವಹಿಸಿರುವ ಪಶ್ಚಿಮ ಬಂಗಾಳ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಕಾರ್ಯಕರ್ತರು...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತಾ: ಲೈಂಗಿಕ ಕಾರ್ಯಕರ್ತರು ಹಾಗೂ ಹೆಚ್ಐವಿ ಪೀಡಿತ ರೋಗಿಗಳ ಕುರಿತಂತೆ ಕಾಳಜಿ ವಹಿಸಿರುವ ಪಶ್ಚಿಮ ಬಂಗಾಳ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಕಾರ್ಯಕರ್ತರು ಹಾಗೂ ಹೆಚ್ಐವಿ ಪೀಡಿತ ರೋಗಿಗಳಿಗೆ ರು.2ಕ್ಕೆ 1 ಕೆ.ಜಿ ಅಕ್ಕಿ ನೀಡುವುದಾಗಿ ಭಾನುವಾರ ಘೋಷಣೆ ಮಾಡಿದೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಸಂದರ್ಶದನಲ್ಲಿ ಮಾತನಾಡಿರುವ ರಾಜ್ಯ ಆಹಾರ ಮತ್ತು ಸರಬರಾಜು ಸಚಿವ ಜ್ಯೋತಿಪ್ರಿಯೋ ಮುಲ್ಲಿಖ್ಕ್ ಅವರು, ಲೈಂಗಿಕ ಕಾರ್ಯಕರ್ತರು ಹಾಗೂ ಹೆಚ್ಐವಿ ಪೀಡಿತ ರೋಗಿಗಳಿಗೆ ರು.2ಕ್ಕೆ 1 ಕೆ.ಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಯೋಜನೆಯಡಿಯಲ್ಲಿ ಕುಷ್ಠರೋಗಿಗಳು ಹಾಗೂ ಕಿವಿ ಕೇಳದ, ಮಾತುಬಾರದ ಮಕ್ಕಳ ಕುಟುಂಬಕ್ಕೂ ರು.2ಕ್ಕೆ 1 ಕೆಜಿಅಕ್ಕಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ರೋಗಿಗಳು, ಮಕ್ಕಳ ಕುರಿತಂತೆ ಸರ್ಕಾರ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದು, ಸಮೀಕ್ಷೆ ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಸಮೀಕ್ಷೆಯಲ್ಲಿ ಲೈಂಗಿಕ ಕಾರ್ಯಕರ್ತರು, ಹೆಚ್ಐವಿ ಪೀಡಿತ ರೋಗಿಗಳ ಸಂಖ್ಯೆಯನ್ನು ತಿಳಿದುಕೊಂಡು ಆ ಕುಟುಂಬಗಳಿಗೆ ಯೋಜನೆಯ ಫಲ ಸಿಗುವಂತೆ ಮಾಡಲಾಗುತ್ತದೆ. ಈ ಸಮೀಕ್ಷೆ 6 ತಿಂಗಳಳೊಗಾಗಿ ಪೂರ್ಣಗೊಳಿಸಲಾಗುತ್ತದೆ. ಯೋಜನೆಯನ್ನು ಮುಂದಿನ ವರ್ಷ ಆರಂಭಿಕ ತಿಂಗಳಿನಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ.

ಅನಾರೋಗ್ಯ ಪೀಡಿತರಾದ ಲೈಂಗಿಕ ಕಾರ್ಯಕರ್ತರು ಹಾಗೂ ಕುಷ್ಟರೋಗಿಗಳು ಅನುಭವಿಸುವ ಯಾತನೆಯನ್ನು ನಾವು ನೋಡಿದ್ದೇವೆ. ಹೀಗಾಗಿ ಅವರ ಸಹಾಯಕ್ಕಾಗಿ ಹೊಸ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಯೋಜನೆಯಿಂದಾಗಿ ಕೊಂಚ ಮಟ್ಟಿಗಾದರೂ ಸಹಾಯವಾಗಲಿ ಎಂಬುದು ನಮ್ಮ ಅನಿಸಿಕೆ. ಸಮೀಕ್ಷೆಯನ್ನು ಸ್ಥಳೀಯ ಅಧಿಕಾರಿಗಳು ಹಾಗೂ ಆಹಾರ ಇಲಾಖೆಯ ವತಿಯಿಂದಲೇ ನಡೆಸಲಾಗುತ್ತದೆ. ಹೆಚ್ಐವಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲಾ ಆಸ್ಪತ್ರೆಗಳಿಗೂ ಆಹಾರ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಆಸ್ಪತ್ರೆಯ ವರದಿಯನ್ನು ಪರಿಶೀಲಿಸಿ ರೋಗಿಗಳಿಗೆ ಯೋಜನೆಯ ಫಲ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com