ಹೆಚ್ಚೆಚ್ಚು ಮಕ್ಕಳನ್ನು ಹೆರಿ: ಸಿರಿವಂತರಿಗೆ ಸಿಎಂ ಚಂದ್ರಬಾಬು ನಾಯ್ಡು ಸಲಹೆ

ಒಂದೇ ಮಗು ಅಥವಾ ಮಕ್ಕಳೇ ಬೇಡ ಎಂಬ ತತ್ವಗಳನ್ನು ಬಿಟ್ಟು, ಹೆಚ್ಚೆಚ್ಚು ಮಕ್ಕಳನ್ನು ಹೆರಿ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶ್ರೀಮಂತ...
ಮಕ್ಕಳ ಪೌಷ್ಠಿಕತೆ ಕುರಿತು ಯುನಿಸೆಫ್ ಆಶ್ರಯದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಮಕ್ಕಳ ಪೌಷ್ಠಿಕತೆ ಕುರಿತು ಯುನಿಸೆಫ್ ಆಶ್ರಯದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ವಿಜಯವಾಡ: ಒಂದೇ ಮಗು ಅಥವಾ ಮಕ್ಕಳೇ ಬೇಡ ಎಂಬ ತತ್ವಗಳನ್ನು ಬಿಟ್ಟು, ಹೆಚ್ಚೆಚ್ಚು ಮಕ್ಕಳನ್ನು ಹೆರಿ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶ್ರೀಮಂತ ಜನರಿಗೆ ಸಲಹೆ ನೀಡಿದ್ದಾರೆ.

ಈ ಹಿಂದಿನಿಂದಲೂ ಜನಸಂಖ್ಯೆ ಹೆಚ್ಚಳದ ಕುರಿತಂತೆ ಪ್ರತಿಪಾದಿಸಿಕೊಂಡು ಬಂದಿರುವ ನಾಯ್ಡು ಅವರು, ಮಕ್ಕಳ ಪೌಷ್ಠಿಕತೆ ಕುರಿತು ಯುನಿಸೆಫ್ ಆಶ್ರಯದಲ್ಲಿ ನಿನ್ನೆ ನಡೆದ ಸಭೆಯೊಂದರಲ್ಲಿ ಮತ್ತೆ ಜನಸಂಖ್ಯೆ ಹೆಚ್ಚಳ ಕುರಿತಂತೆ ಮಾತನಾಡಿದ್ದಾರೆ.

ಕುಟುಂಬ ಯೋಜನೆ ಪ್ರಚಾರದ ಫಲವಾಗಿ ಒಂದೇ ಮಗು ಸಾಕು, ಮಕ್ಕಳೇ ಬೇಡ ಎನ್ನುವ ಟ್ರೆಂಡ್ ಬಂದಿದೆ. ಇದೀಗ ಆ ಯೋಜನೆಯ ಪ್ರಸ್ತುತ ಅಲ್ಲ. ಒಂದು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಹೇಳಬೇಕಿದೆ.

ಬಡ ಕುಟುಂಬದಲ್ಲಿ ಹೆಚ್ಚೆಚ್ಚು ಮಕ್ಕಳಿರುವುದನ್ನು ನಾನು ನೋಡಿದ್ದೇನೆ. ಆದರೆ, ಶ್ರೀಮಂತರ ಕುಟುಂಬಗಳಲ್ಲಿನ ಜನರು ಒಂದು ಮಗುವನ್ನು ಹೊಂದಿರುತ್ತಾರೆ. ಶ್ರೀಮಂತರ ಜನರೂ ಕೂಡ ಹೆಚ್ಚೆಚ್ಚು ಮಕ್ಕಳನ್ನು ಹೆತ್ತರೆ ಉತ್ತಮವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಇದೇ ವೇಳೆ ಚೀನಾ ಮತ್ತು ಜಪಾನ್ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ವೃದ್ಧರ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com