ಶಿಮ್ಲಾದಲ್ಲಿ ಪ್ರಿಯಾಂಕ ಮನೆ ನಿರ್ಮಾಣ: ಅನುಮತಿ ಹಿಂಪಡೆಯುವಂತೆ ಶಾಸಕ ಮನವಿ

ಶಿಮ್ಲಾದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಅವರ ನಿವಾಸಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ಕೋರಿ ಬಿಜೆಪಿ...
ಶಿಮ್ಲಾ ಬಿಜೆಪಿ ಶಾಸಕ ಸುರೇಶ್ ಭಾರಧ್ವಾಜ್
ಶಿಮ್ಲಾ ಬಿಜೆಪಿ ಶಾಸಕ ಸುರೇಶ್ ಭಾರಧ್ವಾಜ್
Updated on: 

ಮಂಡಿ: ಶಿಮ್ಲಾದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಅವರ ನಿವಾಸಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ಕೋರಿ ಬಿಜೆಪಿ ಶಾಸಕ ಸುರೇಶ್ ಭಾರಧ್ವಜ್ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಶನಿವಾರ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದ ಕುರಿತಂತೆ ಮಾತನಾಡಿರುವ ಅವರು, ಶಿಮ್ಲಾದ ಹೈ ಸೆಕ್ಯೂರಿಟಿ ಝೋನ್ ಛರಬ್ರದಲ್ಲಿ ಪ್ರಿಯಾಂಕ ಗಾಂಧಿಯವರ ಮನೆ ನಿರ್ಮಾಣವಾಗುತ್ತಿದ್ದು, ಈಗಾಗಲೇ ನೀಡಿರುವ ಅನುಮತಿಯನ್ನು ಹಿಂಪಡೆಯುವಂತೆ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಶಿಮ್ಲಾದಲ್ಲಿ ರಾಷ್ಟ್ರಪತಿಗಳ ಬೇಸಿಗೆ ಕಾಲದ ನಿವಾಸದ ಸಮೀಪದಲ್ಲೇ ಪ್ರಿಯಾಂಕ ಗಾಂಧಿಯವರ ಮನೆ ನಿರ್ಮಾಣವಾಗುತ್ತಿದೆ. ಈ ಪ್ರದೇಶದಲ್ಲಿ ಮನೆ ನಿರ್ಮಿಸುವುದರಿಂದ ಪ್ರತಿ ವರ್ಷ ನಡೆಯುವ ಪ್ರೆಸಿಡೆಂಟ್ ರಿಟ್ರೀಟ್ ಗೆ ಭದ್ರತೆಯ ತೊಂದರೆಯುಂಟಾಗಬಹುದು. ಹೀಗಾಗಿ ಇಂತಹ ಪ್ರದೇಶದಲ್ಲಿ ಗೃಹ ನಿರ್ಮಾಣಕ್ಕೆ ಅನುಮತಿಯನ್ನು ನೀಡಬಾರದು ಎಂದು ಹೇಳಿದ್ದಾರೆ.

ಭದ್ರತೆಯನ್ನು ಹೊರತುಪಡಿಸಿದರೂ ಕೂಡ ರಿಟ್ರೀಟ್ ಸಮೀಪ ಅಥವಾ ಕಲ್ಯಾಣಿ ಹೆಲಿಪ್ಯಾಡ್ ಸಮೀಪ ನಿರ್ಮಾಣ ಕಾರ್ಯ ನಡೆಸುವಂತಿಲ್ಲ. ಈ ಹಿಂದೆ ಕೂಡ ಅನೇಕ ಕಟ್ಟಡಗಳಿಗೆ ಇಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com