ಮಾರಕ ಕ್ಯಾನ್ಸರ್ ತರಬಲ್ಲ ಪೊಟ್ಯಾಶಿಯಂ ಬ್ರೊಮೇಟ್ ನಿಷೇಧ

ಬ್ರೆಡ್, ಪಾವ್ ಮತ್ತು ಬನ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಪೊಟ್ಯಾಶಿಯಂ ಬ್ರೊಮೇಟ್ ಕ್ಯಾನ್ಸರ್‌ಗೆ ಕಾರಣವಾಗುವ ಕುರಿತು ವರದಿಗಳು ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ರಾಸಾಯನಿಕವನ್ನು ನಿಷೇಧಿಸಿದೆ...
ಬ್ರೆಡ್ ಮತ್ತು ಬನ್ ಗಳಲ್ಲಿ ಪೊಟ್ಯಾಶಿಯಂ ಬ್ರೊಮೇಟ್ (ಸಂಗ್ರಹ ಚಿತ್ರ)
ಬ್ರೆಡ್ ಮತ್ತು ಬನ್ ಗಳಲ್ಲಿ ಪೊಟ್ಯಾಶಿಯಂ ಬ್ರೊಮೇಟ್ (ಸಂಗ್ರಹ ಚಿತ್ರ)

ನವದೆಹಲಿ: ಬ್ರೆಡ್, ಪಾವ್ ಮತ್ತು ಬನ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಪೊಟ್ಯಾಶಿಯಂ ಬ್ರೊಮೇಟ್ ಕ್ಯಾನ್ಸರ್‌ಗೆ ಕಾರಣವಾಗುವ ಕುರಿತು ವರದಿಗಳು ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ರಾಸಾಯನಿಕವನ್ನು ನಿಷೇಧಿಸಿದೆ.

ಈ ಹಿಂದೆ ಬ್ರೆಡ್, ಬನ್ ಮತ್ತು ಪಾವ್ ಗಳಲ್ಲಿ ಬಳಕೆ ಮಾಡಲಾಗುವ ರಾಸಾಯನಿಕ ಪೊಟ್ಯಾಶಿಯಂ ಬ್ರೊಮೇಟ್ ಮಾರಕ ಕ್ಯಾನ್ಸರ್ ಗೆ ಕಾರಣವಾಗಬಲ್ಲದು ಎಂದು ಸಿಎಸ್‌ಇ ತನ್ನ ಅಧ್ಯಯನದಲ್ಲಿ ತಿಳಿಸಿತ್ತು. ಕೇಂದ್ರ ಸರ್ಕಾರದ ವಿಶೇಷ ತಂಡ ಈ ಬಗ್ಗೆ ನಡೆಸಿದ ತನಿಖೆಯಲ್ಲಿ ಅದು ದೃಢಪಟ್ಟ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪೊಟ್ಯಾಶಿಯಂ ಬ್ರೊಮೇಟ್‌ಗೆ ನಿಷೇಧ ಹೇರಿದೆ. ಕೇವಲ ಪೊಟ್ಯಾಶಿಯಂ ಬ್ರೊಮೇಟ್ ನಷ್ಟೇ ಅಲ್ಲದೇ ವಿವಿಧ ತಿನಿಸುಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುವ ಪೊಟ್ಯಾಶಿಯಂ ಅಯೋಡೇಟ್ ನಿಂದಾಗಿಯೂ ಅನಾರೋಗ್ಯಕರ ಸಮಸ್ಯೆಗಳು ಉಂಟಾಗಬಹುದು ಎಂಬ ವರದಿ ಹಿನ್ನಲೆಯಲ್ಲಿ ಇದನ್ನೂ ಶೀಘ್ರದಲ್ಲಿಯೇ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಆಹಾರ ಸುರಕ್ಷತಾ ಮಾನ್ಯತೆ ಮಂಡಳಿ, (ಎಫ್ ಎಸ್‌ಎಸ್‌ಎಐ) ಪೊಟ್ಯಾಶಿಯಂ ಅಯೋಡೇಟ್ ಕೂಡಾ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದ್ದು, ಶೀಘ್ರ ಅದನ್ನು ಕೂಡಾ ನಿಷೇಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಸಿಎಎಸ್ ಇ ವರದಿ
ಬ್ರೆಡ್, ಬನ್ ಮತ್ತು ಪಾವ್ ಸೇರಿದಂತೆ ದೇಶದ 38 ಪ್ರಖ್ಯಾತ ಬ್ರೆಡ್, ಬನ್ ಮತ್ತು ರೆಡಿ ಟು ಈಟ್ ಬರ್ಗರ್ ಮತ್ತು ಪಿಜ್ಜಾಗಳಲ್ಲಿ ಬಳಸಲಾಗುವ ಪೊಟ್ಯಾಶಿಯಂ ಬ್ರೊಮೇಟ್ ಎಂಬ ರಾಸಾಯನಿಕದಿಂದ ಕ್ಯಾನ್ಸರ್ ರೋಗ ಬರಬಹುದು ಎಂದು ದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಅಧ್ಯಯನ ತಿಳಿಸಿತ್ತು. ಬ್ರಿಟಾನಿಯಾ, ಹಾರ್ವೆಸ್ಟ್ ಗೋಲ್ಡ್, ಕೆಎಫ್​ಸಿ,  ಪಿಜ್ಜಾಹಟ್, ಡಾಮಿನೋಸ್ ಮತ್ತು ಸಬ್​ವೇ ಸೇರಿದಂತೆ ದೇಶದ 38 ಪ್ರಖ್ಯಾತ ಬ್ರೆಡ್, ಬನ್ ಮತ್ತು ರೆಡಿ ಟು ಈಟ್ ಬರ್ಗರ್ ಮತ್ತು ಪಿಜ್ಜಾಗಳನ್ನು ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ ಶೇ.84  ಉತ್ಪನ್ನಗಳಲ್ಲಿ ಪೊಟ್ಯಾಶಿಯಂ ಬ್ರೊಮೇಟ್ ಮತ್ತು ಐಯೋಡೇಟ್ ಅಂಶವಿರುವುದು ಬೆಳಕಿಗೆ ಬಂದಿದೆ. ಈ ರಾಸಾಯನಿಕಗಳಿಂದ ಕ್ಯಾನ್ಸರ್ ಮತ್ತು ಥೈರಾಯಿಡ್ ಸಂಬಂಧಿ ಕಾಯಿಲೆಗಳು ಬರುವ  ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com