ವೇಯ್ಟರ್ ಹೇಳಿಕೆ: ಸ್ಪಷ್ಟನೆ ನೀಡಿದ ಸುಬ್ರಮಣಿಯನ್ ಸ್ವಾಮಿ

ಭಾರತೀಯ ಸಾಂಪ್ರಾದಾಯಿಕ ಉಡುಗೆ ಕುರಿತು ನೀಡಿದ್ದ ವೇಯ್ಟರ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್...
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಭಾರತೀಯ ಸಾಂಪ್ರಾದಾಯಿಕ ಉಡುಗೆ ಕುರಿತು ನೀಡಿದ್ದ ವೇಯ್ಟರ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯವೊಂದರ ಜೊತೆ ಮಾತನಾಡಿರುವ ಅವರು, ಪಾಶ್ಚಿಮಾತ್ರ ವಸ್ತ್ರದ ಕುರಿತು ಟೀಕೆ ಮಾಡುತ್ತಿರುವುದು ಇದು ಹೊಸದೇನಲ್ಲ. ಪಾಶ್ಚಿಮಾತ್ಯ ವಸ್ತ್ರ ಧರಿಸಿ ವಿದೇಶಕ್ಕೆ ಹೋಗುವಾಗ ಅಧಿಕಾರಿಗಳ ಕುರಿತು ಈ ಹಿಂದಿನಿಂದಲೂ ಟೀಕೆ ವ್ಯಕ್ತಪಡಿಸುತ್ತಲೇ ಬಂದಿದ್ದೇನೆ.ಈ ಹಿಂದೆ ಯುಪಿಎ ಅಧಿಕಾರಾವಧಿಯಲ್ಲಿಯೂ ಕೂಡ ನಾನು ಈ ರೀತಿಯ ಟೀಕೆ ವ್ಯಕ್ತಪಡಿಸಿದ್ದೇನೆಂದು ಹೇಳಿದ್ದಾರೆ.

ನಾನು ಯಾವಾಗಲೂ ಭಾರತೀಯ ಸಂಪ್ರದಾಯದ ಬಟ್ಟೆಗಳನ್ನೇ ಧರಿಸುತ್ತೇನೆ. ನಾನು ಏನನ್ನು ಅಭ್ಯಾಸ ಮಾಡಿಕೊಂಡಿದ್ದೇನೆಯೋ ಅದನ್ನೇ ಬೋಧಿಸುತ್ತೇನೆ. ಯಾರನ್ನು ಗುರಿ ಮಾಡಬೇಕೆಂಬ ಉದ್ದೇಶ ನನಗಿಲ್ಲ. ಜೇಟ್ಲಿಯವರು ಪಾಶ್ಚಿಮಾತ್ಯ ವಸ್ತ್ರದಲ್ಲಿ ಚೆನ್ನಾಗಿ ಕಾಣಿಸುತ್ತಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com