ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಧಿಕಾರ ಒಪ್ಪಂದ: ಪ್ರಮುಖ 5 ಅಂಶಗಳು

ಭಾರತ ಸೋಮವಾರ ಅಧಿಕೃತವಾಗಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಧಿಕಾರ(ಎಂಟಿಸಿಆರ್) ಪೂರ್ಣ ಸದಸ್ಯನಾಗಿ...
ಅತ್ಯಾಧುನಿಕ ಕ್ಷಿಪಣಿ ಚಿತ್ರ
ಅತ್ಯಾಧುನಿಕ ಕ್ಷಿಪಣಿ ಚಿತ್ರ

ನವದೆಹಲಿ: ಭಾರತ ಸೋಮವಾರ ಅಧಿಕೃತವಾಗಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಧಿಕಾರ(ಎಂಟಿಸಿಆರ್) ಪೂರ್ಣ ಸದಸ್ಯನಾಗಿ ಸೇರ್ಪಡೆಗೊಂಡಿದೆ. ಪರಮಾಣು ಪೂರೈಕೆ ಗುಂಪಿನ ಸದಸ್ಯತ್ವ ಪಡೆಯುವಲ್ಲಿ ವಿಫಲವಾದ ಮೂರು ದಿನಗಳ ಬಳಿಕ ಭಾರತ ಪ್ರವೇಶವಾಗಿದೆ.

ಅಮೆರಿಕ ಜೊತೆ ನಾಗರಿಕ ಪರಮಾಣು ಒಪ್ಪಂದವಾದ ಬಳಿಕ ಭಾರತ ರಫ್ತು ನಿಯಂತ್ರಣ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ. ಅವುಗಳಲ್ಲಿ ಎನ್ ಎಸ್ ಜಿ, ಎಂಟಿಸಿಆರ್, ಆಸ್ಟ್ರೇಲಿಯಾ ಗುಂಪು ಮತ್ತು ವಸ್ಸೆನ್ನಾರ್ ವ್ಯವಸ್ಥೆಗಳು ಮುಖ್ಯವಾದವುಗಳು. ಅವು ಸಾಂಪ್ರದಾಯಿಕ, ಪರಮಾಣು, ಜೈವಿಕ ಹಾಗೂ ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿವೆ.

35ನೇ ಸದಸ್ಯ ರಾಷ್ಟ್ರವಾಗಿ ಭಾರತದ ಸೇರ್ಪಡೆ, ಅಂತಾರಾಷ್ಟ್ರೀಯ ಪರಮಾಣು ನಿಶಸ್ತ್ರೀಕರಣ ಉದ್ದೇಶಗಳಿಗೆ ಪರಸ್ಪರ ಸಹಕಾರಿಯಾಗಲಿದೆ.
ಹಾಗಾದರೆ ಏನಿದು ಎಂಟಿಸಿಆರ್ ಒಪ್ಪಂದ, ಭಾರತಕ್ಕೆ ಏನು ಇದರ ಪ್ರಯೋಜನ?:

1. ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಖರೀದಿಸಲು ಎಂಟಿಸಿಆರ್ ಸದಸ್ಯತ್ವ ಸಹಕಾರಿಯಾಗಲಿದ್ದು, ರಷ್ಯಾ ಜೊತೆ ಜಂಟಿ ಕಾರ್ಯಾಚರಣೆಗೆ ಸಹ ನೆರವಾಗಲಿದೆ.
2. ಕ್ಷಿಪಣಿಗಳ ಪ್ರಸರಣ ತಡೆ, ಸಂಪೂರ್ಣ ರಾಕೆಟ್ ವ್ಯವಸ್ಥೆ, 500 ಕಿಲೋ ಗ್ರಾಂ ತೂಕದ ಪೇ ಲೋಡ್ ನ್ನು 300 ಕಿಲೋ ಮೀಟರ್ ವರೆಗೆ ಹೊತ್ತೊಯ್ಯುವ ಸಾಮರ್ಥ್ಯವಿರುವ ಮಾನವರಹಿತ ವಾಯು ವಾಹನ, ಸಂಪೂರ್ಣ ನಾಶಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಗೆ ವ್ಯವಸ್ಥೆಯನ್ನು ಹೊಂದುವ ಗುರಿಯನ್ನು ಎಂಟಿಸಿಆರ್ ಹೊಂದಿದೆ.
3. ಹೇಗ್ ನೀತಿ ಸಂಹಿತಿಗೆ ಸೇರ್ಪಡೆಯಾಗಲು ಎಂಟಿಸಿಆರ್ ಒಪ್ಪಂದ ವಿಶೇಷ ಶಕ್ತಿ ಕೊಡಲಿದೆ.
4. ಈ ಒಪ್ಪಂದ ಇಟೆಲಿಯ ನೌಕಾಪಡೆಯನ್ನು ಪತ್ತೆಹಚ್ಚಲು ನೆರವಾಗಲಿದೆ. ಕಳೆದ ವರ್ಷ ಇಟೆಲಿ ಭಾರತದ ಸದಸ್ಯತ್ವವನ್ನು ನಿರಾಕರಿಸಿತ್ತು. ಆದರೆ ಕಳೆದ ಮೇ 29ರಂದು ರೋಮ್ ಗೆ ಎರಡನೇ ನೌಕೆ ಸಲ್ವಟೋರ್ ಗಿರೋನೆ ಆಗಮಿಸಿದ್ದು, ಈಗ ಇಟೆಲಿಗೆ ತಡೆಹಿಡಿಯಲು ಸಾಧ್ಯವಿಲ್ಲ.
5. 48 ದೇಶಗಳ ನಾಗರಿಕ ಪರಮಾಣು ಗುಂಪಿಗೆ ಭಾರತ ಸೇರ್ಪಡೆಯಾಗಲು ಚೀನಾ ಅಡ್ಡಗಾಲು ಹಾಕಿತ್ತು. ಆದರೆ 35 ರಾಷ್ಟ್ರಗಳನ್ನೊಳಗೊಂಡ ಎಂಟಿಸಿಆರ್ ನ ಸದಸ್ಯ ರಾಷ್ಟ್ರವಾಗಿಲ್ಲ ಚೀನಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com