
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ಆಗಿ ಎನ್.ಎಸ್.ವಿಶ್ವನಾಥನ್ ಅವರು ಆಯ್ಕೆಗೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಸರ್ಕಾರಿ ನೇಮಿತ ಸಮಿತಿ ಭಾರತೀಯ ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಆಗಿ ಎನ್.ಎಸ್. ವಿಶ್ವನಾಥನ್ ಅವರನ್ನು ಆಯ್ಕೆ ಮಾಡಿರುವುದಾಗಿ ಮಾಧ್ಯಮಗಳ ವರದಿಗಳು ತಿಳಿಸಿವೆ.
ವಿಶ್ವನಾಥನ್ ಅವರು ಪ್ರಸ್ತುತ ಆರ್ ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕನಾಗಿದ್ದು, ಬ್ಯಾಂಕ್ ನಿಯಂತ್ರಣ ಮತ್ತು ಬ್ಯಾಕಿಂಗೇತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಆರ್ ಬಿಐ ನಲ್ಲಿ 4 ಉಪ ಗವರ್ನರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಾಲ್ವರಲ್ಲಿ ಖಾನ್ ಎಂಬುವವರು ಜುಲೈ. 3 ರಂದು ನಿವೃತ್ತಿಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಿತಿ ಖಾನ್ ಅವರ ಸ್ಥಾನಕ್ಕೆ ವಿಶ್ವನಾಥನ್ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
Advertisement