

ಪಾಟ್ನ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಘ ಪರಿವಾರದ ಆಂತರಿಕ ಪ್ರಚಾರಕರಾಗಲ್ಲದೆ, ಭಾರತದ ಪ್ರಧಾನಿಯಂತೆ ವರ್ತಿಸಬೇಕು ಎಂದು ಆರ್‌ಜೆಡಿ ಶನಿವಾರ ಹೇಳಿಕೊಂಡಿದೆ.
ಕಳೆದ ವರ್ಷ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆ ಸೋಲಿನ ನಂತರ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮೋದಿ ಭೇಟಿ ಕುರಿತಂತೆ ಮಾತನಾಡಿರುವ ಆರ್‌ಜೆಡಿ ಪಕ್ಷದ ವಕ್ತಾರ ಮನೋಜ್ ಝಾ ಅವರು, ನರೇಂದ್ರ ಮೋದಿಯವರನ್ನು ಒಂದು ಬಾರಿಯಾದರೂ ಸಂಘ ಪರಿವಾರದ ಪ್ರಚಾರಕರಾಗಿ ಅಲ್ಲದೆ, ಭಾರತದ ಪ್ರಧಾನಮಂತ್ರಿಯಾಗಿ ನೋಡಬೇಕು. ಮೋದಿಯವರು ಬಿಹಾರವನ್ನು ಇತರೆ ರಾಜ್ಯಗಳಂತೆಯೇ ನೋಡಬೇಕೆಂದು ಬಯಸುತ್ತೇವೆಂದು ಹೇಳಿದ್ದಾರೆ.