ಪಶ್ಚಿಮ ಬಂಗಾಳದಲ್ಲಿ ಇಸೀಸ್ ನ ಶಂಕಿತ ಬೆಂಬಲಿಗನ ಬಂಧನ

ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ಪಶ್ಚಿಮ ಬಂಗಾಳದಲ್ಲಿ ಇಸೀಸ್ ಉಗ್ರ ಸಂಘಟನೆಯ ಶಂಕಿತ ಬೆಂಬಲಿಗನನ್ನು ಬಂಧಿಸಿದೆ.
ಪಶ್ಚಿಮ ಬಂಗಾಳದಲ್ಲಿ ಇಸೀಸ್ ನ ಶಂಕಿತ ಬೆಂಬಲಿಗನ ಬಂಧನ
ಪಶ್ಚಿಮ ಬಂಗಾಳದಲ್ಲಿ ಇಸೀಸ್ ನ ಶಂಕಿತ ಬೆಂಬಲಿಗನ ಬಂಧನ
Updated on: 

ಕೋಲ್ಕತಾ: ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ಪಶ್ಚಿಮ ಬಂಗಾಳದಲ್ಲಿ ಇಸೀಸ್ ಉಗ್ರ ಸಂಘಟನೆಯ ಶಂಕಿತ ಬೆಂಬಲಿಗನನ್ನು ಬಂಧಿಸಿದೆ.
ರಾಜ ಅಲಿಯಾಸ್ ಆಶಿಕ್ ಅಹ್ಮದ್ ಬಂಧಿತನಾಗಿದ್ದು, ಹೂಗ್ಲಿ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದ್ದು ಪೊಲೀಸ್ ವಶಕ್ಕೆ ನೀಡಲು ವಿನಂತಿಸಿ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 
ಸಿರಿಯಾದ ಇಸ್ಲಾಮಿಕ್ ಉಗ್ರ ಸಂಘಟನೆ ಭಾರತೀಯ ಯುವಕರನ್ನು ಸೆಳೆಯುತ್ತಿದ್ದು, ಈಗಾಗಲೇ ಹಲವು ಯುವಕರು ಉಗ್ರ ಸಂಘಟನೆ ಸೇರಿರುವುದರ ಬಗ್ಗೆ ರಾಷ್ಟ್ರೀಯ ತನಿಖಾ ದಳ 2015 ರ ಡಿಸೆಂಬರ್ ನಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.
ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಇಸೀಸ್ ಸಂಘಟನೆಯನ್ನು ಬೆಂಬಲಿಸುತ್ತಿದ್ದ ಒಟ್ಟು 14 ಜನ ಶಂಕಿತರನ್ನು ಎನ್ ಐಎ ಬಂಧಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com