ಇದೇ ಮೊದಲ ಬಾರಿಗೆ ದೆಹಲಿಯ ವ್ಯಾಪಾರ ಮತ್ತು ತೆರಿಗೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಇಲಾಖೆ ಶಿಫಾರಸು ಮಾಡುತ್ತಿದ್ದ ಕೆಲವು ತೆರಿಗೆ ಪ್ರಕರಣಗಳ ಕುರಿತು ತನಿಖೆ ನಡೆಸುವಲ್ಲಿ ಕೆಲ ದೆಹಲಿ ಪೊಲೀಸರು ಅಸಡ್ಡೆ ವರ್ತನೆ ನಡೆಸುತ್ತಿದ್ದರು. ಇದರಿಂದ ಅನೇಕರ ವಿರುದ್ದ ಸರಿಯಾದ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ತೆರಿಗೆ ಇಲಾಖೆಯೇ ಖುದ್ದಾಗಿ ತನಿಖೆ ನಡೆಸಿ, ಚಾರ್ಚ್ ಶೀಟ್ ಸಲ್ಲಿಸಲು ಮುಂದಾಗಿದೆ.