ಪ್ರಧಾನಿ, ರಕ್ಷಣಾ ಕಚೇರಿಗಳಿರುವ ಸಂಸತ್ ಭವನದ ದಕ್ಷಿಣ ಬ್ಲಾಕ್​ನಲ್ಲಿ ಭಾರಿ ಅಗ್ನಿ ಆಕಸ್ಮಿಕ

ಸಂಸತ್ ಭವನದಲ್ಲಿ ಬ್ಲಾಕ್​ನಲ್ಲಿ ಸಂಜೆ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದೆ.
ಅಗ್ನಿ ಅವಘಡ
ಅಗ್ನಿ ಅವಘಡ

ನವದೆಹಲಿ: ಸಂಸತ್ ಭವನದಲ್ಲಿ ಬ್ಲಾಕ್​ನಲ್ಲಿ ಸಂಜೆ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದೆ.

ಭವನದ ದಕ್ಷಿಣ ಬ್ಲಾಕ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರ ಕಚೇರಿಗಳು ಹಾಗೂ ವಿದೇಶಾಂಗ ಸಚಿವಾಲಯದ ಕೋಣೆಗಳಿವೆ. ಸಂಜೆ 5.50ರ ಸುಮಾರಿಗೆ ಈ ಅಗ್ನಿ ಅವಗಡ ಸಂಭವಿಸಿದ್ದು, ಸ್ಥಳಕ್ಕೆ 13 ಅಗ್ನಿಶಾಮಕ ವಾಹನಗಳು ತೆರಳಿದ್ದು ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.

ಅಗ್ನಿ ಅವಘಡದಲ್ಲಿ ಯಾವುದೇ ತೊಂದರೆ ಸಂಭವಿಸಿಲ್ಲ. ಅಗ್ನಿ ಆಕಸ್ಮಿಕಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com