ಕಸಬ್ ಬಿಡುಗಡೆಗೆ ಲಷ್ಕರ್ ಕಸರತ್ತು ನಡೆಸಿತ್ತು: ಹೆಡ್ಲಿ

ಮುಂಬೈ ದಾಳಿಯ ಪ್ರಮುಖ ರುವಾರಿಯಾಗಿದ್ದ ಉಗ್ರ ಅಜ್ಮಲ್ ಕಸಬ್ ನನ್ನು ಬಿಡುಗಡೆಗೊಳಿಸುವ ಸಲುವಾಗಿ ಸಂಘಟನೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು...
ಉಗ್ರ ಡೇವಿಡ್ ಹೆಡ್ಲಿ
ಉಗ್ರ ಡೇವಿಡ್ ಹೆಡ್ಲಿ

ಮುಂಬೈ: ಮುಂಬೈ ದಾಳಿಯ ಪ್ರಮುಖ ರುವಾರಿಯಾಗಿದ್ದ ಉಗ್ರ ಅಜ್ಮಲ್ ಕಸಬ್ ನನ್ನು ಬಿಡುಗಡೆಗೊಳಿಸುವ ಸಲುವಾಗಿ ಸಂಘಟನೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು, ಇದಕ್ಕಾಗಿ ಇಸ್ರೇಲ್ ಜನರನ್ನು ಒತ್ತೆಯಾಳಾಗಿರಿಸಿಕೊಂಡು ಭಾರತದ ಮೇಲೆ ಒತ್ತಡ ಹೇರಲು ಯತ್ನ ನಡೆಸಿದ್ದವು ಎಂದು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಹೇಳಿಕೊಂಡಿದ್ದಾನೆ.

ಈ ಕುರಿತಂತೆ ನಿನ್ನೆ ನಡೆದ 3ನೇ ದಿನದ ಪಾಟಿ ಸವಾಲು ಪ್ರಕ್ರಿಯೆ ವೇಳೆ ಬಾಯ್ಲಿಟ್ಟಿರುವ ಹೆಡ್ಲಿ, ಮುಂಬೈ ದಾಳಿ ನಂತರ ಉಗ್ರ ಅಜ್ಮಲ್ ಕಸಬ್ ನನ್ನು ಭಾರತೀಯ ಅಧಿಕಾರಿಗಳು ಬಂಧಿಸಿರುವ ವಿಷಯವನ್ನು ಎಲ್ ಇಟಿ ಸಂಘಟನೆಯ ಪ್ರಮುಖ ವ್ಯಕ್ತಿಯಾಗಿರುವ ಸಾಜಿದ್ ಮೀರ್ ನನಗೆ ತಿಳಿಸಿದ್ದ. ಕೂಡಲೇ ಚಾಬಾದ್ ಹೌಸ್ ನಲ್ಲಿದ್ದ ಉಗ್ರರ ಜತೆ ಮಾತುಕತೆ ನಡೆಸಲಾಗಿತ್ತು.

ಈ ವೇಳೆ ಇಸ್ರೇಲ್ ಪ್ರಜೆಗಳನ್ನು ಒತ್ತೆಯಾಳುಗಳಾಗಿರಿಸಿಕೊಳ್ಳಲು ಅವರಿಗೆ ಸೂಚನೆ ನೀಡಲಾಗಿತ್ತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಾದರೆ, ಕಸಬ್ ನನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರುವುದು ನಮ್ಮ ಉದ್ದೇಶವಾಗಿತ್ತು. ಒತ್ತೆಯಾಳುಗಳಾಗಿರಿಸಿಕೊಂಡ ಬಳಿಕ ಇಸ್ರೇಲ್ ಪ್ರಧಾನಿ ಹಾಗೂ ಅಲ್ಲಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಭಾರತ ಮೇಲೆ ಒತ್ತಡ ಹೇರಲು ಸೂಚಿಸುವಂತೆ ಸಾಜಿದ್ ಮಿರ್ ಪ್ರಯತ್ನ ನಡೆಸಿದ್ದ. ಆದರೆ, ಈ ಪ್ರಯತ್ನ ಯಶಸ್ವಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಇದಲ್ಲದೆ, ಮುಂಬೈ ಮೇಲಿನ ದಾಳಿಯಲ್ಲಿ ಪಾಲ್ಗೊಂಡ ಆತ್ಮಹತ್ಯಾ ದಳದ ಎಲ್ಲ 9 ಮಂದಿ ಉಗ್ರರಿಗೂ ಪಾಕಿಸ್ತಾನ ಅತ್ಯುನ್ನತ ಗೌರವ 'ನಿಶಾನ್ ಎ ಹೈದರ್' ನೀಡಿ ಗೌರವಿಸಬೇಕೆಂಬುದು ನನ್ನ ಬಯಕೆಯಾಗಿತ್ತು ಎಂದು ಹೇಳಿಕೊಂಡಿದ್ದಾನೆ.

ಇದೇ ವೇಳೆ ಇಶ್ರತ್ ಜಹಾನ್ ಭಯೋತ್ಪಾದಕಿ ಎಂದು ಹೇಳಿಕೆ ನೀಡುವಂತೆ ಎನ್ ಐಎ ಒತ್ತಡ ಹೇರಿತ್ತು ಎಂಬ ಆರೋಪಗಳನ್ನು ತಿರಸ್ಕರಿಸುವ ಹೆಡ್ಲಿ, 2009ರಲ್ಲಿ ಅಮೆರಿಕದಲ್ಲಿ ಸೆರೆಸಿಕ್ಕ ವೇಳೆ ಅಲ್ಲಿಗೆ ಆಗಮಿಸಿ ವಿಚಾರಣೆ ನಡೆಸಿದ್ದ ಭಾರತದ ರಾಷ್ಟ್ರೀಯ ತನಿಖಾ ದಳ, ಗುಜರಾತ್ ನಲ್ಲಿ ಎನ್ ಕೌಂಟರ್ ನಲ್ಲಿ ಹತ್ಯಾಯಾದ ಇಶ್ರಾತ್ ಜಹಾನ್ ಉಗ್ರರಳೆಂದು ಹೇಳುವಂತೆ ನನ್ನ ಮೇಲೆ ಒತ್ತಡವನ್ನು ಹೇರಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com