26/11 ಮುಂಬೈ ದಾಳಿ ತನಿಖೆಗೂ ಭಾರತಕ್ಕೆ ಅವಕಾಶ ನೀಡಿ: ಪಾಕ್'ಗೆ ಒಮರ್ ಅಬ್ದುಲ್ಲಾ

ಪಠಾಣ್ ಕೋಟ್ ದಾಳಿ ತನಿಖೆ ನಡೆಸಲು ಪಾಕಿಸ್ತಾನ ತನಿಖಾ ತಂಡಕ್ಕೆ ಭಾರತ ಅನುಮತಿ ನೀಡಿರುವಂತೆಯೇ ಭಾರತಕ್ಕೂ 26/11 ಮುಂಬೈ ದಾಳಿ ಕುರಿತಂತೆ ಪಾಕಿಸ್ತಾನದಲ್ಲಿ ತನಿಖೆ ನಡೆಸಲು...
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಶ್ರೀನಗರ: ಪಠಾಣ್ ಕೋಟ್ ದಾಳಿ ತನಿಖೆ ನಡೆಸಲು ಪಾಕಿಸ್ತಾನ ತನಿಖಾ ತಂಡಕ್ಕೆ ಭಾರತ ಅನುಮತಿ ನೀಡಿರುವಂತೆಯೇ ಭಾರತಕ್ಕೂ 26/11 ಮುಂಬೈ ದಾಳಿ ಕುರಿತಂತೆ ಪಾಕಿಸ್ತಾನದಲ್ಲಿ ತನಿಖೆ ನಡೆಸಲು ಪಾಕಿಸ್ತಾನ ಸರ್ಕಾರ ಅವಕಾಶ ನೀಡಬೇಕೆಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಕುರಿತಂತೆ ಇದೀಗ ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ. ಇದಕ್ಕೆ ಅನುಮತಿ ನೀಡಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಹಲವು ನಾಯಕರು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಒಮರ್ ಅಬ್ದುಲ್ಲಾ ಅವರು, ಪಾಕಿಸ್ತಾನ ತನಿಖಾ ತಂಡ ಪಠಾಣ್ ಕೋಟ್ ಗೆ ಭೇಟಿ ನೀಡಿರುವುದರಿಂದ ಭಾರತಕ್ಕಾಗಿರುವ ಪ್ರಯೋಜನಕಾರಿ ಏನೆಂಬುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ. ಆದರೆ, ಇದರಿಂದ ನಮಗೆ ಪ್ರಯೋಜನವಾಗಲಿದೆ ಎಂದು ನಾವು ನಂಬಿದ್ದೇವೆ. ಪ್ರಯೋಜನ ಅಂದರೆ ದಾಳಿ ಮಾಡಿದವರು ಸಿಕ್ಕಿಹಾಕಿಕೊಂಡು ಕಠಿಣ ಶಿಕ್ಷೆ ನೀಡುವುದು ಎಂದರ್ಥ ಎಂದು ಹೇಳಿದ್ದಾರೆ.

ಇದೀಗ ಪಠಾಣ್ ಕೋಟ್ ದಾಳಿ ಕುರಿತಂತೆ ತನಿಖೆ ನಡೆಸಲು ಭಾರತ ಪಾಕಿಸ್ತಾನಕ್ಕೆ ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸರ್ಕಾರ ಕೂಡ ಭಾರತೀಯ ತನಿಖಾ ತಂಡಕ್ಕೆ ಮುಂಬೈ 26/11 ಮುಂಬೈ ದಾಳಿ ಪ್ರಕರಣವನ್ನು ಪಾಕಿಸ್ತಾನದಲ್ಲಿ ತನಿಖೆ ನಡೆಸಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ.

ಒಂದು ವೇಳೆ ಇಂಡೋ-ಪಾಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸತ್ಯ ಹಾಗೂ ಸಾಮರಸ್ಯದ ಆಯೋಗವನ್ನು ರಚನೆ ಮಾಡಬಹುದು. ಇದರಿಂದ ಜನರಿಗಾಗಿರುವ ಗಾಯಗಳನ್ನು ವಾಸಿ ಮಾಡಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com