

ಪಿಲಿಬಿತ್(ಉತ್ತರಪ್ರದೇಶ): ಅಕ್ರಮವಾಗಿ ಉದ್ದಿಪ್ಪನ ಮದ್ದು ಒಯ್ಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ಯುವಕರಿಬ್ಬರು ಠಾಣೆಯಲ್ಲಿ ಮೃತಪಟ್ಟಿದ್ದು, ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಎಸ್ಎಚ್ಒ ಇನ್ಸ್‌ಪೆಕ್ಟರ್ ಶಕ್ತಿ ಸಿಂಗ್ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಉತ್ತರಪ್ರದೇಶದ ಪಿಲಿಬಿತ್ ನಲ್ಲಿ ಸದ್ದಾಂ ಹಾಗೂ ಅಖಿಲ್ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ ಠಾಣೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ವಿಚಾರಣೆ ಹೆಸರಲ್ಲಿ ಪೊಲೀಸರ ನೀಡಿದ ಚಿತ್ರಹಿಂಸೆಯಿಂದಾಗಿ ಯುವಕರು ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.