

ನವದೆಹಲಿ: ದೇಶದ ಪ್ರಥಮ ಬುಲೆಟ್ ರೈಲು ಮುಂಬೈ ಹಾಗೂ ಅಹಮದಾಬಾದ್ ನಡುವೆ ಸಂಚರಿಸಲಿದ್ದು, ರೈಲಿನ ಪ್ರಯಾಣ ದರ 3300 ರುಪಾಯಿ ಆಗಿರುವ ಸಾಧ್ಯತೆ ಇದೆ.
ಮುಂಬೈ ಹಾಗೂ ಅಹಮದಾಬಾದ್ ನಡುವೆ 508 ಕಿ.ಮೀ ಅಂತರವಿದ್ದು. ಸದ್ಯ ಈ ಮಾರ್ಗವಾಗಿ ಸಂಚರಿಸುತ್ತಿರುವ ರೈಲುಗಳಲ್ಲಿ ಪ್ರಥಮ ದರ್ಜೆ ಎ.ಸಿ ಪ್ರಯಾಣಕ್ಕೆ ಈಗ ಇರುವ ದರದ ಒಂದೂವರೆ ಪಟ್ಟು ಅಧಿಕ ದರವನ್ನು ಬುಲೆಟ್ ರೈಲಿಗೆ ನಿಗದಿಪಡಿಸಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಇಲಾಖೆ ಸಂಸತ್ತಿಗೆ ತಿಳಿಸಿದೆ.
ಇನ್ನು ಈ ಮಾರ್ಗವಾಗಿ ಸಂಚರಿಸುವ ಬುಲೆಟ್ ರೈಲಿನ ವೇಗ ಮೊದಲ ಹಂತದಲ್ಲಿ ಗಂಟೆಗೆ 350 ಕಿ.ಮೀ ಇರಲಿದ್ದು, ನಂತರ 320ಕ್ಕೆ ಕಡಿತಗೊಳ್ಳಲಿದೆ ಎಂದು ಲೋಕಸಭೆಗೆ ತಿಳಿಸಿದರು.
ಈ ಮಾರ್ಗವಾಗಿ ಸಂಚರಿಸುತ್ತಿರುವ ತುರಂತೋ ರೈಲಿನ ಪ್ರಥಮ ದರ್ಜೆ ಎ.ಸಿ. ಬೋಗಿಯ ಒಂದು ಸೀಟಿಗೆ 2,200 ರುಪಾಯಿ ಪ್ರಯಾಣ ದರವಿದೆ.
ಇನ್ನು ಜಪಾನ್‌ಗೆ ಹೋಲಿಸಿದರೆ ಈ ದರ ತೀರಾ ಕಡಿಮೆ. ಟೋಕಿಯೋ ಹಾಗೂ ಒಸಾಕಾ ನಡುವಿನ 550 ಕಿ.ಮೀ. ದೂರಕ್ಕೆ ಜಪಾನ್‌ನಲ್ಲಿ 8500 ರು. ಪ್ರಯಾಣ ದರ ನಿಗದಿಯಾಗಿದೆ.