ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುಬ್ರತಾ ರಾಯ್ ಗೆ ಪೆರೋಲ್ ನೀಡಿದ ಸುಪ್ರೀಂ

ತಾಯಿ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹರಾ ಸಂಸ್ಥೆ ಮುಖ್ಯಸ್ಥ ಸುಬ್ರತಾ ರಾಯ್ ಗೆ ಸುಪ್ರೀಂಕೋರ್ಟ್...
ಸುಬ್ರತೋರಾಯ್
ಸುಬ್ರತೋರಾಯ್
Updated on
ನವದೆಹಲಿ: ತಾಯಿ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹರಾ ಸಂಸ್ಥೆ ಮುಖ್ಯಸ್ಥ ಸುಬ್ರತಾ ರಾಯ್ ಗೆ ಸುಪ್ರೀಂಕೋರ್ಟ್ ಪೆರೋಲ್ ನೀಡಿದೆ. 
1 ತಿಂಗಳ ಅವಧಿಗೆ ಪೆರೋಲ್ ಮೇಲೆ ಸುಬ್ರತಾ ರಾಯ್ ಅವರನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. 
ಷೇರುದಾರರಿಗೆ ನೀಡಬೇಕಿದ್ದ ಹಣವನ್ನು ನೀಡಲಾಗದೇ ಜೈಲು ಪಾಲಾಗಿದ್ದ ಸಹರಾ ಸಂಸ್ಥೆ ಮುಕ್ಯಸ್ಥ ಸುಬ್ರತಾ ರಾಯ್ ಅವರ ತಾಯಿ 95 ವರ್ಷದ ಛಬಿರಾಯ್ ಅವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. 
ಕಳೆದ ಎರಡು ವರ್ಷದಳಿಂದ ಅನಾರೋಗ್ಯ ಪೀಡಿತರಾಗಿದ್ದ ಛಬಿರಾಯ್ ಅವರು, ಕೆಲ ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದರು. ಹೀಗಾಗಿ ಅವರನ್ನು ಲಖನೌನ ಸಹರಾ ಶಹರ್ ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಮುಂಜಾನೆ ಅವರು ಚಿಕಿತ್ಸೆ  ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com