ದೆಹಲಿ ಪೊಲೀಸರು
ದೆಹಲಿ ಪೊಲೀಸರು

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ದೆಹಲಿ ಪೊಲೀಸರ ಬೇಜವಾಬ್ದಾರಿತನದ ಅನುಭವ: ಪಿಐಎಲ್ ದಾಖಲು

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ದೆಹಲಿ ಪೊಲೀಸರ ಬೇಜವಾಬ್ದಾರಿತನದ ಅನುಭವ: ಪಿಐಎಲ್ ದಾಖಲು

ನವದೆಹಲಿ: ಪೊಲೀಸರಿಗೆ ಕರೆ ಮಾಡಿದರೂ ಅವರಿಂದ ಪ್ರತಿಕ್ರಿಯೆ ಬಾರದ ಘಟನೆಗಳು ದೆಹಲಿಯ ಸಾಮಾನ್ಯ ಜನರಿಗೆ ಅದೆಷ್ಟು ಬಾರಿ ಅನುಭವಕ್ಕೆ ಬಂದಿವೆಯೋ? ದೆಹಲಿ ಪೊಲೀಸರ ಬೇಜವಾಬ್ದಾರಿತನ ಈಗ ದೆಹಲಿ ನ್ಯಾಯಯಮೂರ್ತಿಗಳಿಗೂ ಅನುಭವಕ್ಕೆ ಬಂದಿದೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವಸಂತ್ ಕುಂಜ್ ಗೆ ತೆರಳುತ್ತಿದ್ದ ದೆಹಲಿಯ ಹೈಕೋರ್ಟ್ ನ್ಯಾ. ವಿಪಿನ್ ಸಂಘಿ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು.ಆದರೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರ್ಯಾರೂ ಇಲ್ಲದಿದ್ದನ್ನು ಗಮನಿಸಿದ ನ್ಯಾ. ವಿಪಿನ್ ಸಂಘಿ, ತಕ್ಷಣವೇ 100 ಗೆ ಕರೆ ಮಾಡಿದ್ದಾರೆ. ಆದರೆ ಯಾರೊಬ್ಬರೂ ಅವರ ಕರೆಗೆ ಪ್ರತಿಕ್ರಿಯೆ ನೀಡಲಿಲ್ಲ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ನ್ಯಾ. ವಿಪಿನ್ ಸಂಘಿ, ದೆಹಲಿ ಪೊಲೀಸರ ಬೇಜವಾಬ್ದಾರಿತನದ ಬಗ್ಗೆ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೇ ವಾಹನ ದಟ್ಟಣೆ ತೆರವಾದ ನಂತರವೂ ಪೊಲೀಸ್ ಠಾಣೆಗೆ ಹಲವು ಬಾರಿ ಕರೆ ಮಾಡಲಾದರೂ ಯಾರೊಬ್ಬರೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ದೆಹಲಿ ಪೊಲೀಸರ ಬೇಜವಾಬ್ದಾರಿತನದ ಬಗ್ಗೆ ವಿಪಿನ್ ಸಂಘಿ ದೆಹಲಿ ಹೈಕೋರ್ಟ್ ನ ಮುಖ್ಯ ನ್ಯಾ.ಜಿ ರೋಹಿತಿ ಅವರಿಗೂ ಪತ್ರ ಬರೆದಿದ್ದು ತಮ್ಮ ಪತ್ರವನ್ನು ಪಿಐಎಲ್ ಎಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಸುಮೋಟೊ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವುದಾಗಿ ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com