ಹೈದರಾಬಾದ್ ನಲ್ಲಿ ಇಳಿಯಲಿದೆ ವಿಶ್ವದ ಅತೀ ದೊಡ್ಡ ವಿಮಾನ

ಜಗತ್ತಿನಲ್ಲೇ ಅತಿ ದೊಡ್ಡ ವಿಮಾನ ಎ೦ಬ ಖ್ಯಾತಿಗೆ ಪಾತ್ರವಾಗಿರುವ "ಆ್ಯ೦ಟೋನೊವ್ ಎಎನ್‍-225 ಮ್ರಿಯಾ" ವಿಮಾನ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದು, ಮೇ13ರಂದು ಹೈದರಾಬಾದ್‍ನ ರಾಜೀವ್ ಗಾ೦ಧಿ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.
ಆ್ಯಂಟನೋವ್  ಎಎನ್-225 ಮ್ರಿಯಾ ವಿಮಾನ (ಸಂಗ್ರಹ ಚಿತ್ರ)
ಆ್ಯಂಟನೋವ್ ಎಎನ್-225 ಮ್ರಿಯಾ ವಿಮಾನ (ಸಂಗ್ರಹ ಚಿತ್ರ)
Updated on

ಹೈದರಾಬಾದ್: ಜಗತ್ತಿನಲ್ಲೇ ಅತಿ ದೊಡ್ಡ ವಿಮಾನ ಎ೦ಬ ಖ್ಯಾತಿಗೆ ಪಾತ್ರವಾಗಿರುವ "ಆ್ಯ೦ಟೋನೊವ್ ಎಎನ್‍-225 ಮ್ರಿಯಾ" ವಿಮಾನ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದು,  ಮೇ13ರಂದು ಹ್ಯೆದರಾಬಾದ್‍ನ ರಾಜೀವ್ ಗಾ೦ಧಿ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

ಈ ಬೃಹತ್ ಉಕ್ಕಿನ ಹಕ್ಕಿಯನ್ನು ಉಕ್ರೇನ್ ನಿರ್ಮಿಸಿದ್ದು, ಉಕ್ರೇನ್ ಭಾಷೆಯಲ್ಲಿ ಮ್ರಿಯಾ ಎ೦ದರೆ ಕನಸು ಎಂದರ್ಥ. ಹೀಗಾಗಿ ಈ ವಿಶ್ವದ ಅತೀ ದೊಡ್ಡ ವಿಮಾನಕ್ಕೆ ಹಾರುವ ಕನಸು ಎಂದು  ಹೆಸರಿಡಲಾಗಿದೆ. ಸುಮಾರು 117 ಟನ್ ತೂಕದ ಪವರ್ ಜನರೇಟರ್ ಒ೦ದನ್ನು ಆಸ್ಟ್ರೇಲಿಯಾದ ಸಿಡ್ನಿಗೆ ಸಾಗಿಸುವ ಸಲುವಾಗಿ ಈ ಬೃಹತ್ ವಿಮಾನವನ್ನು ಬಳಕೆ ಮಾಡಲಾಗುತ್ತಿದ್ದು, ಪ್ರೇಗ್  ನಿಂದ ಜನರೇಟರ್ ಅನ್ನು ಹೊತ್ತ ವಿಮಾನ ಭಾರತ ಮಾರ್ಗವಾಗಿ ಸಿಡ್ನಿಯತ್ತ ಪ್ರಯಾಣ ಬೆಳೆಸಿದೆ.

ಮಾರ್ಗ ಮಧ್ಯೆ ಇಂಧನ ತುಂಬಿಸಿಕೊಳ್ಳುವ ಸಲುವಾಗಿ ಈ ಬೃಹತ್ ವಿಮಾನ ಇದೇ ಮೇ 13ರಂದು ಹೈದರಾಬಾದ್ ರಾಜೀವ್ ಗಾ೦ಧಿ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.  ಅಲ್ಲಿ ಒಂದೆರಡು ತಾಸು ನಿಲ್ಲುವ ವಿಮಾನ ಇಂಧನ ತುಂಬಿಸಿಕೊಳ್ಳುವುದು ಸೇರಿ ತಾಂತ್ರಿಕ ತಪಾಸಣೆ ಬಳಿಕ ಸಿಡ್ನಿಯತ್ತ ಪ್ರಯಾಣ ಬೆಳೆಸಲಿದೆ. ವಿಮಾನ ನಿಲ್ದಾಣದ ಸೌಲಭ್ಯ, ರನ್‍ವೇ ವಿಸ್ತಾರ,  ಏರ್ ಟ್ರಾಫಿಕ್ ನಿವ೯ಹಣೆ, ತಾ೦ತ್ರಿಕ ಸವಾಲುಗಳು ಸೇರಿ ಪ್ರಮುಖ ಅ೦ಶಗಳನ್ನು ಪರಿಶೀಲಿಸಿದ ಬಳಿಕ ವಿಮಾನವನ್ನು ಹ್ಯೆದರಾಬಾದ್‍ನಲ್ಲಿ ಇಳಿಸಲು ನಿಧ೯ರಿಸಲಾಗಿದೆ.

ಗಿನ್ನೆಸ್ ದಾಖಲೆ ಸೇರಿದ ಬೃಹತ್ ವಿಮಾನ

ಇನ್ನು ಉಕ್ರೇನ್ ನಿರ್ಮಿತ ಈ ಬೃಹತ್ ಮ್ರಿಯಾ ವಿಮಾನ ತನ್ನ ಅಪಾರ ಸಾಮಥ್ಯ೯ದಿ೦ದಾಗಿ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ. ವಿವಿಧ ಸ೦ದರ್ಭಗಳಲ್ಲಿ ಹಲವು ದೇಶಗಳು ತಮ್ಮ ಸೇನಾ  ಕಾರ್ಯಕ್ಕೆ ಮತ್ತು ಸರಕು ಸಾಗಣೆಗೆ ಮ್ರಿಯಾವನ್ನು ಬಳಸಿಕೊ೦ಡಿವೆ. ಸೇನಾ ಕ್ಯಾ೦ಪ್‍ಗೆ ಸಿದ್ಧಪಡಿಸಿದ ಆಹಾರ ಸಾಗಿಸುವುದರಿ೦ದ ತೊಡಗಿ ಅಗತ್ಯ ವಸ್ತುಗಳ ಸಾಗಣೆಗೂ ಇದನ್ನು  ಬಳಸಲಾಗಿದೆ.

ಮ್ರಿಯಾ ವಿಮಾನದ ವಿಶೇಷತೆಗಳನು?
ಉಕ್ರೇನ್ ನಿರ್ಮಿತ ಈ ಬೃಹತ್ ವಿಮಾನ ಸುಮಾರು 2,85,000 ಕೆಜೆ ತೂಕವಿದ್ದು, 640ಟನ್ ಭಾರವನ್ನು ಹೊರುವ ಸಾಮರ್ಥ್ಯವಿದೆ. ಈ ಬೃಹತ್ ವಿಮಾನ 84 ಮೀ ಉದ್ದವಿದ್ದು, 18 ಮೀ.  ಎತ್ತರವಿದೆ. ಇದರ ಇಂಧನ ಸಾಮರ್ಥ್ಯ ಬರೋಬ್ಬರಿ 3,00,000 ಕೆಜಿಯಷ್ಟಿದ್ದು, ಈ ಬೃಹತ್ ವಿಮಾನ ಗಂಟೆಗೆ 850 ಕಿ,ಮೀ ವೇಗದಲ್ಲಿ ಕ್ರಮಿಸುತ್ತದೆ. ಪ್ರಮುಖ ವಿಚಾರವೆಂದರೆ ಈ ವಿಮಾನ  ಕೆಳಗಿಳಿಯುವಾಗ ಅಂದರೆ ಈ ವಿಮಾನದ ಲ್ಯಾಂಡಿಂಗ್ ಗೇರ್ ಬರೊಬ್ಬರಿ 32 ಚಕ್ರಗಳನ್ನು ಹೊಂದಿದೆ. ಈ ಬೃಹತ್ ವಿಮಾನದಳೊಗಿನ ಜಾಗ ಎಷ್ಟು ವಿಸ್ತಾರವಾಗಿದೆ ಎಂದರೆ 10 ಬ್ರಿಟಿಷ್ ಯುದ್ಧ  ಟ್ಯಾ೦ಕರ್ ಗಳನ್ನು ಸೇರಿಸಿದರೆ ಆಗುವಷ್ಟು ವಿಸ್ತಾರದ ಜಾಗ ಹೊ೦ದಿದ್ದು, ಅಷ್ಟೊ೦ದು ಪ್ರಮಾಣದ ಸರಕು ಹೊರಬಲ್ಲದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com