ವಿದೇಶಿ ಮಹಿಳೆ ಮೇಲೆ ಪತಿಯಿಂದ ರೇಪ್: ಸಂತ್ರಸ್ತೆಗೆ ಪತ್ನಿಯಿಂದ ಬ್ಲಾಕ್ ಮೇಲ್

ಉಜ್ಬೇಕಿಸ್ತಾನ ಯುವತಿಯ ಮೇಲೆ ದೆಹಲಿ ಮೂಲದ ಅಲ್ತಾಫ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಉಜ್ಬೇಕಿಸ್ತಾನ ಯುವತಿಯ ಮೇಲೆ ದೆಹಲಿ ಮೂಲದ ಅಲ್ತಾಫ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ದೆಹಲಿಯ ಖಾಸಗಿ ಹೋಟೆಲ್ ಒಂದರಲ್ಲಿ ಅಲ್ತಾಫ್ ಎಂಬುವವನು ಉಜ್ಬೇಕಿಸ್ತಾನದ 23 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯವನ್ನು ಅಲ್ತಾಫ್ ಪತ್ನಿ ಅಂಜಲಿ ವಿಡಿಯೋ ಮಾಡಿದ್ದು, ದಂಪತಿಗಳು ಆ ಯುವತಿನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. 
ಅಲ್ತಾಫ್ ಫೇಸ್ ಬುಕ್ ಮೂಲಕ ಉಜ್ಬೇಕಿಸ್ತಾನದ ಯುವತಿಯ ಸ್ನೇಹ ಬೆಳೆಸಿದ್ದನು. ತದ ನಂತರ ಮದುವೆಯಾಗುವುದಾಗಿ ನಂಬಿಸಿ ಭಾರತಕ್ಕೆ ಕರೆಸಿಕೊಂಡಿದ್ದಾನೆ. ಆತನ ಮಾತುಗಳನ್ನು ನಂಬಿದ ಆಕೆ ದೆಹಲಿಗೆ ಬಂದಿದ್ದಾಳೆ. ಆಕೆಯನ್ನು ಕರೆದುಕೊಂಡು ಹೋದ ಅಲ್ತಾಫ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗುತ್ತಿರುವ ದೃಶ್ಯವನ್ನು ಪತ್ನಿ ವಿಡಿಯೋ ಮಾಡಿಕೊಂಡಿದ್ದಾಳೆ. ತದ ನಂತರ ಆ ವಿಡಿಯೋವನ್ನು ಹಿಡಿದು ಆಕೆಯನ್ನು ಮಾಂಸ ದಂಧೆ ಮಾಡುವಂತೆ ದಂಪತಿಗಳು ಬ್ಲಾಕ್ ಮೇಲ್ ಮಾಡಿದ್ದಾರೆ. 
ದಂಪತಿಗಳು ನನ್ನ ಪಾಸ್ ಪೋರ್ಟ್, ವೀಸಾ ಮತ್ತು ಹಣವನ್ನು ಕಸಿದುಕೊಂಡಿದಲ್ಲದೇ, ನನ್ನನ್ನು ರೂಮೀನಲ್ಲಿ ಕೂಡಿ ಹಾಕಿ ನಿತ್ಯ ಹಲ್ಲೆ ಮಾಡುತ್ತಿದ್ದರು. ಬರುವ ಅತಿಥಿಗಳೊಂದಿಗೆ ಮಾಂಸದಂಧೆ ನಡೆಸುವಂತೆ ಒತ್ತಾಯಿಸುತ್ತಿದ್ದರು ಎಂದು ಯುವತಿ ಹೇಳಿದ್ದಾಳೆ. 
ಅವರಿಂದ ತಪ್ಪಿಸಿಕೊಳ್ಳಲು ಈ ವಿಷಯವನ್ನು ದೆಹಲಿಯಲ್ಲಿರುವ ನನ್ನ ಸ್ನೇಹಿತರಿಗೆ ತಿಳಿಸಿದೆ. ಸ್ನೇಹಿತರು ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತದ ನಂತರ ನನ್ನನ್ನು ರಕ್ಷಿಸಲಾಗಿದೆ ಎಂದು ಯುವತಿ ಹೇಳಿದ್ದಾಳೆ.
ಪೊಲೀಸರು ಆರೋಪಿ ಅಂಜಲಿಯನ್ನು ಬಂಧಿಸಿದ್ದಾರೆ. ಅಲ್ತಾಫ್ ತಲೆಮರೆಸಿಕೊಂಡಿದ್ದಾನೆ. ಇನ್ನು ಆರೋಪಿಗಳ ವಿರುದ್ಧ 376 ಸೆಕ್ಷನ್ ಅಡಿ ಅತ್ಯಾಚಾರ, ಮಾಂಸದಂಧೆ ಸೇರಿದಂತೆ ಇತರೆ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com