ಫೇಸ್ ಬುಕ್ ಪೋಸ್ಟ್ ಗಳ ಮೇಲೂ ಬಿತ್ತು ಐಟಿ ಕಣ್ಣು!

ಶ್ರೀಮಂತರಾಗಿದ್ದರೂ ಶ್ರೀಮಂತರಲ್ಲರೆಂದು ಬಿಂಬಿಸಿಕೊಂಡು ತೆರಿಗೆ ವಿನಾಯಿತಿ ಪಡೆದು ಐಷಾರಾಮಿ ಕಾರು, ವಿದೇಶಿ ಪ್ರವಾಸ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕಿ ಪೋಸು...
ಫೇಸ್ ಬುಕ್ (ಸಂಗ್ರಹ ಚಿತ್ರ)
ಫೇಸ್ ಬುಕ್ (ಸಂಗ್ರಹ ಚಿತ್ರ)

ಮುಂಬೈ: ಶ್ರೀಮಂತರಾಗಿದ್ದರೂ ಶ್ರೀಮಂತರಲ್ಲರೆಂದು ಬಿಂಬಿಸಿಕೊಂಡು ತೆರಿಗೆ ವಿನಾಯಿತಿ ಪಡೆದು ಐಷಾರಾಮಿ ಕಾರು, ವಿದೇಶಿ ಪ್ರವಾಸ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕಿ ಪೋಸು ಕೊಡುತ್ತಿರುವವರಿಗೆ ಇದೀಗ ಕಾದಿದೆ ಆಪತ್ತು.

ಇಷ್ಟು ದಿನ ಆಸ್ತಿ ಮಾಹಿತಿ ಹಾಗೂ ಇನ್ನಿತರೆ ಮಾಹಿತಿ ಆಧಾರದ ಮೇಲೆ ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ತೆರಿಗೆ ಇಲಾಖೆಯ ಅಧಿಕಾರಿಗಳು ಇದೀಗ ತೆರಿಗೆ ಕಳ್ಳರನ್ನು ಹಿಡಿಯಲು ಫೇಸ್ ಬುಕ್ ನಂತಹ ಹೊಸ ದಾರಿಯನ್ನು ಕಂಡು ಕೊಂಡಿದ್ದಾರೆ.

ವಿದೇಶ ಪ್ರವಾಸ, ದುಬಾರಿ ಕಾರುಗಳಿಗೆ ಪೋಸು ನೀಡಿದ ಫೋಟೋಗಳನ್ನು ಫೇಸ್ ಬುಕ್ ಸಹಿತ ಸಾಮಾಜಿಕ ಜಾಲತಾಣಗಳ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರೆ, ಅದನ್ನು ತೆರಿಗೆ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ನಿಮ್ಮಿಂದ ಬಾಕಿ ತೆರಿಗೆ ವಸೂಲಿ ಮಾಡಲಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕಾಗಿ ತೆರಿಗೆ ಕಳ್ಳರನ್ನು ಹಿಡಿಯಲು ತೆರಿಗೆ ಪಾವತಿದಾರರ ಸಾಮಾಜಿಕ ಜಾಲತಾಣ ಪೋಸ್ಟ್ ಗಳ ಮೇಲೆ ಐಟಿ ಅಧಿಕಾರಿಗಳು ಇದೀಗ ಕಣ್ಣಿರಿಸಿದ್ದಾರೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ಬಗ್ಗೆ ತಮ್ಮ ಅಧಿಕಾರಿಗಳಿಗೆ ಅಧಿಕೃತ ನಿರ್ದೇಶನಗಳನ್ನು ನೀಡಿಲ್ಲ. ಆದರೆ, ತೆರಿಗೆ ಪಾವತಿದಾರರ ಕುರಿತು ಮಾಹಿತಿ ಸಂಗ್ರಹಿಸಲು ಸಾಮಾಜಿಕ ಜಾಲ ತಾಣದ ಪೋಸ್ಟ್ ಗಳ ಕುರಿತ ಮಾಹಿತಿ ಉಪಯುಕ್ತವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com