ಮೇ 10 ರಿಂದ ಜುಲೈ ಅಂತ್ಯದವರೆಗೆ ಬರಪೀಡಿತ ಮಾರಾಠಾವಾಡಾ ಪ್ರದೇಶದಲ್ಲಿ ಮದ್ಯ ಉದ್ದಿಮೆಗೆ 60% ನೀರು ಕಡಿತಗೊಳಿಸುವಂತೆ ಮತ್ತು ಇತರ ಉದ್ದಿಮೆಗಳಿಗೆ 25% ನೀರು ಕಡಿತಗೊಳಿಸುವಂತೆ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ ಆದೇಶ ನೀಡಿತ್ತು ಎನ್ನುವುದನ್ನು ಸುಪ್ರೀಂ ಕೋರ್ಟ್ ಗೆ ಅರ್ಜಿದಾರ ತಿಳಿಸಿದ್ದರು. ಸಾಮಾಜಿಕ ಕಾರ್ಯಕರ್ತರಾಗಿರುವ ಅರ್ಜಿದಾರರು ಈ 40% ನೀರು ಸರಬರಾಜನ್ನು ಕೂಡ ನಿಲ್ಲಿಸುವಂತೆ ಮನವಿ ಮಾಡಿದ್ದರು.