ರಾಜ್ಯಸಭೆಗೆ ಕೈ ಅಭ್ಯರ್ಥಿಗಳು ಅಂತಿಮ; ಕನ್ನಡಿಗರಿಗೆ ಆದ್ಯತೆ

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೈಕಮಾಂಡ್ ಶುಕ್ರವಾರ ಅಂತಿಮಗಳಿಸಿದ್ದು, ಕಾಂಗ್ರೆಸ್ ಹಿರಿಯ...
ಭಾರತ ಸಂಸತ್ತು(ಸಂಗ್ರಹ ಚಿತ್ರ)
ಭಾರತ ಸಂಸತ್ತು(ಸಂಗ್ರಹ ಚಿತ್ರ)
Updated on: 

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೈಕಮಾಂಡ್ ಶುಕ್ರವಾರ ಅಂತಿಮಗಳಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡರು, ಕನ್ನಡಿಗರಾದ ಆಸ್ಕರ್ ಫರ್ನಾಂಡಿಸ್, ಜೈರಾಂ ರಮೇಶ್ ಒಂದನೇ ಮತ್ತು 2ನೇ ಅಭ್ಯರ್ಥಿ ಹಾಗೂ ಕೆಸಿ ರಾಮಮೂರ್ತಿ 3ನೇ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯಸಭೆಗೆ 2ನೇ ಅಭ್ಯರ್ಥಿ ಸ್ಥಾನಕ್ಕೆ ಪಿ.ಚಿದಂಬರಂ, ಕಪಿಲ್ ಸಿಬಲ್, ಜೈರಾಮ್ ರಮೇಶ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಹೊರರಾಜ್ಯದವರ ಆಯ್ಕೆ ವಿರುದ್ಧ ರಾಜ್ಯಾದ್ಯಂತ ಎದ್ದಿರುವ ಕೂಗಿಗೆ ಹೈಕಮಾಂಡ್ ಮನ್ನಣೆ ನೀಡಿದ್ದು, ಆ ನಿಟ್ಟಿನಲ್ಲಿ ಜೈರಾಮ್ ರಮೇಶ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.

ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇಂದು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ವಿಧಾನಪರಿಷತ್ ಗೆ ಸಂಭವನೀಯರ ಪಟ್ಟಿ:
ನಾಮಕರಣ ಸದಸ್ಯತ್ವಕ್ಕೆ ನಟಿ ಭಾವನಾ ರಾಮಣ್ಣ, ಸಾಹಿತಿಗಳಾದ ಮರುಳ ಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಲಿಂಗಾಯತ ಸಮುದಾಯ ವತಿಯಿಂದ ವೀರಣ್ಣ ಮತ್ತಿಕಟ್ಟಿ ಅಥವಾ ಕೊಂಡಜ್ಜಿ ಮೋಹನ್ ಒಕ್ಕಲಿಗ ಸಮುದಾಯ ವತಿಯಿಂದ ಟಿವಿ ಮಾರುತಿ ಅಥವಾ ಸಿಎಂ ಲಿಂಗಪ್ಪ ಒಬಿಸಿಯಿಂದ ಕೆಪಿ ನಂಜುಂಡಿ ಹೆಸರು ಅಂತಿಮಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com