ದೂರು ನೀಡಲು ಬಂದವನ ಕೈಯಲ್ಲಿ ಶೂ ಪಾಲಿಷ್ ಮಾಡಿಕೊಂಡ ಪೊಲೀಸಪ್ಪ!

ಮೊಬೈಲ್ ಫೋನ್ ಕಳೆದು ಹೋಗಿದೆ ಎಂದು ದೂರು ನೀಡಲು ಬಂದ ದೂರದಾರನ ಕೈಯಲ್ಲೇ ಪೊಲೀಸಪ್ಪನೊಬ್ಬ ಶೂ ಪಾಲಿಷ್ ಮಾಡಿಸಿಕೊಂಡಿರುವ ಘಟನೆಯೊಂದು ಮುಜಾಫರ್‌ನಗರದಲ್ಲಿ ನಡೆದಿದೆ...
ದೂರು ನೀಡಲು ಬಂದವನ ಕೈಯಲ್ಲಿ ಶೂ ಪಾಲಿಷ್ ಮಾಡಿಕೊಂಡ ಪೊಲೀಸಪ್ಪ!
ದೂರು ನೀಡಲು ಬಂದವನ ಕೈಯಲ್ಲಿ ಶೂ ಪಾಲಿಷ್ ಮಾಡಿಕೊಂಡ ಪೊಲೀಸಪ್ಪ!
Updated on: 

ಮುಜಾಫರ್‌ನಗರ: ಮೊಬೈಲ್ ಫೋನ್ ಕಳೆದು ಹೋಗಿದೆ ಎಂದು ದೂರು ನೀಡಲು ಬಂದ ದೂರದಾರನ ಕೈಯಲ್ಲೇ ಪೊಲೀಸಪ್ಪನೊಬ್ಬ ಶೂ ಪಾಲಿಷ್ ಮಾಡಿಸಿಕೊಂಡಿರುವ ಘಟನೆಯೊಂದು ಮುಜಾಫರ್‌ನಗರದಲ್ಲಿ ನಡೆದಿದೆ,

ವೃತ್ತಿಯಲ್ಲಿ ಚಮ್ಮಾರನಾಗಿರುವ ಸಿತ್ತು ಎಂಬ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್ ಕಳೆದುಹೋಗಿದೆ ಎಂದು ದೂರು ನೀಡಲು ಚರ್ತಾವಾಲ್ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ ಸಿತ್ತು ಅವರ ವೃತ್ತಿಯನ್ನು ಕೇಳಿರುವ ಅಲ್ಲಿನ ರೊಹ್ತಾಶ್ ಎಂಬ ಪೇದೆ ಷೂ ಪಾಲಿಶ್ ಮಾಡಿದರೆ ಮಾತ್ರವೇ ದೂರು ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾನೆ.

ಇದರಂತೆ ಪೊಲೀಸರ ಮಾತನ್ನು ಕೇಳಿರುವ ಸತ್ತು ಅವರು ಪೊಲೀಸರ ಶೂಗಳನ್ನು ಪಾಲಿಶ್ ಮಾಡಿದ್ದಾರೆ. ಇನ್ನು ಈ ಘಟನೆಯ ವಿಡಿಯೋವನ್ನು ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋವಿಗೆ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ ಪಿ ಸಂತೋಷ್ ಕುಮಾರ್ ಅವರು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ಪೊಲೀಸ್ ಠಾಣೆಯಲ್ಲಿ ಇಂತಹದ್ದೇ ಅವಮಾನಕರ ಘಟನೆ ಈ ಹಿಂದೆಯೂ ನಡೆದಿತ್ತು. 75 ವರ್ಷದ ಶರೀಫಾನ್ ಎಂಬ ವಿಧವೆ ಮುದುಕಿಯೊಬ್ಬರು ತಮ್ಮ ಪತಿಯ ಎರಡನೇ ಹೆಂಡತಿ ಮಗ ಹಾಗೂ ಮೊಮ್ಮಗಳು ಕಿರುಕುಳ ನೀಡುತ್ತಿದ್ದಾರೆಂದು ಹೇಳಿ ದೂರು ನೀಡಲು ಬಂದಿದ್ದಾರೆ. ಇದೇ ರೊಹ್ತಾಶ್ ಎಂಬ ಪೇದೆ ಅವರಿಗೆ ದೂರು ದಾಖಲಿಸುವ ಬದಲು ನೀನೇ ಮತ್ತೊಂದು ಮದುವೆಯಾಗಿಬಿಡು ಎಂದು ಅವಮಾನಿಸಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com