ಗಡಿಯಲ್ಲಿ ಮುಂದುವರೆದ ಪಾಕ್ ತಂಟೆ; ಭಾರತೀಯರ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಭಾರತೀಯ ಯೋಧರ ಪೋಸ್ಟ್ ಗಳತ್ತ ಮಾರ್ಟರ್ ಶೆಲ್ ಗಳನ್ನು ಸಿಡಿಸಿದ ಪರಿಣಾಮ ಗಡಿಯಲ್ಲಿರುವ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಶ್ರೀನಗರ: ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನಿ ಸೈನಿಕ ಪುಂಡಾಟ ಮುಂದುವರಿದ್ದು, ಭಾರತೀಯ ಯೋಧರ ಪೋಸ್ಟ್ ಗಳತ್ತ ಮಾರ್ಟರ್ ಶೆಲ್ ಗಳನ್ನು ಸಿಡಿಸಿದ ಪರಿಣಾಮ ಗಡಿಯಲ್ಲಿರುವ  ಗ್ರಾಮಸ್ಥರು ಸಾವನ್ನಪ್ಪುತ್ತಿದ್ದಾರೆ. ಹೀಗೆ ಸಾವನ್ನಪ್ಪಿದವರ ಸಂಖ್ಯೆ ಇದೀಗ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8ಕ್ಕೇರಿದ್ದು, ಗಡಿಯಲ್ಲಿರುವ ಗ್ರಾಮಸ್ಥರು ಗ್ರಾಮಗಳನ್ನು ತೊರೆಯುವಂತಾಗಿದೆ.

ಪಾಕಿಸ್ತಾನದ ಅಪ್ರಚೋದಿತ ದಾಳಿ ಹಿನ್ನಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಈ ವರೆಗೂ ಗಡಿಯಲ್ಲಿರುವ ಸುಮಾರು 400 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.  ಸಾಂಬಾ, ಪೂಂಚ್, ರಾಮಘಡ ಸೆಕ್ಟರ್ ಗಳಲ್ಲಿ ಶೆಲ್ ದಾಳಿ ತೀವ್ರವಾಗಿದ್ದು, ಶೆಲ್ ದಾಳಿಯಿಂದ ಆಘಾತಗೊಂಡ ವಯೋವೃದ್ಧರೊಬ್ಬರು ಕುಸಿದು ಸಾವನ್ನಪ್ಪಿದ್ದಾರೆ. ಶೆಲ್ ದಾಳಿಯಲ್ಲಿ ಈವರೆಗೂ  8 ಮಂದಿ ಭಾರತೀಯರು ಸಾವನ್ನಪ್ಪಿದ್ದು, ಮೃತರನ್ನು ರವೀಂದರ್ ಕೌರ್ (19 ವರ್ಷ), ರಿಷಪ್ (7 ವರ್ಷ), ಅಭಿ (5 ವರ್ಷ), ಅಂಜು ದೇವಿ (29 ವರ್ಷ), ಮೀರು ರಾಮ್ (60 ವರ್ಷ) ಮತ್ತು   ಸ್ವರ್ಣಸಿಂಗ್ (32 ವರ್ಷ) ಎಂದು ತಿಳಿದುಬಂದಿದೆ.

ಅಂತೆಯೇ ಘಟನೆಯಲ್ಲಿ ಈ ವರೆಗೂ ಸುಮಾರು 15 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲ ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆ ಹಾಗೂ ಸೇನಾಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಭಾರತದ ಪ್ರತಿದಾಳಿಗೆ 14 ಪಾಕ್ ಯೋಧರ ಪೋಸ್ಟ್ ಗಳು ಧ್ವಂಸ
ಇತ್ತ ಭಾರತೀಯ ಪಡೆಗಳತ್ತ ಪಾಕಿಸ್ತಾನಿ ಸೈನಿಕರು ದಾಳಿ ತೀವ್ರಗೊಳಿಸುತ್ತಿದ್ದಂತೆಯೇ ಅತ್ತ ಭಾರತೀಯ ಯೋಧರು ಕೂಡ ದಿಟ್ಟ ಉತ್ತರ ನೀಡಿದ್ದಾರೆ. ನಿನ್ನೆ ನಡೆದ ವಿಶೇಷ  ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಸೈನಿಕರ ಸುಮಾರು 14 ಅಡಗುದಾಣಗಳನ್ನು ಭಾರತೀಯ ಯೋಧರು ಧ್ವಂಸಗೊಳಿಸಿದ್ದಾರೆ. ಅಂತೆಯೇ ಭಾರತೀಯ ಪೋಸ್ಟ್ ಗಳತ್ತ ಗುಂಡು ಹಾರಿಸುತ್ತಿದ್ದ  ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಕೂಡ ಹೊಡೆದುರುಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಒಟ್ಟಾರೆ ಭಾರತದ ಸೀಮಿತ ದಾಳಿ ಬಳಿಕ ಪಾಕಿಸ್ತಾನ ಗಡಿಯಲ್ಲಿ ನಿರಂತರ ಪುಂಡಾಟ ಮುಂದುವರೆಸಿದ್ದು, ಪಾಕ್ ಪುಂಡಾಟದಿಂದಾಗಿ ಗಡಿಯಲ್ಲಿ ಗ್ರಾಮಸ್ಥರು ಮನೆಗಳನ್ನು  ತೊರೆಯುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com