ಭಾರತದ ಮೇಲೆ ಇಸಿಸ್ ದಾಳಿ ಸಾಧ್ಯತೆ: ಅಮೆರಿಕ ಎಚ್ಚರಿಕೆ

ವಿದೇಶಿಗರನ್ನು ಗುರಿಯಾಗಿಸಿಕಕೊಂಡು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಉಗ್ರರು ಭಾರತದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಕೆ ರವಾನಿಸಿದೆ.
ಭಾರತದ ಮೇಲೆ ಉಗ್ರ ದಾಳಿ ಸಾಧ್ಯತೆ (ಸಂಗ್ರಹ ಚಿತ್ರ)
ಭಾರತದ ಮೇಲೆ ಉಗ್ರ ದಾಳಿ ಸಾಧ್ಯತೆ (ಸಂಗ್ರಹ ಚಿತ್ರ)

ನವದೆಹಲಿ: ವಿದೇಶಿಗರನ್ನು ಗುರಿಯಾಗಿಸಿಕಕೊಂಡು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಉಗ್ರರು ಭಾರತದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಕೆ ರವಾನಿಸಿದೆ.

ಭಾರತದಲ್ಲಿರುವ ಎಲ್ಲ ಅಮೆರಿಕ ಪ್ರಜೆಗಳಿಗೆ ಅಮೆರಿಕ ರಾಯಭಾರ ಕಚೇರಿಯಿಂದ ನಿನ್ನೆ ತುರ್ತು ಸಂದೇಶ ರವಾನೆಯಾಗಿದ್ದು, ಸಂದೇಶದಲ್ಲಿ ಭಾರತದಲ್ಲಿರುವ ವಿದೇಶಿಗರನ್ನು  ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಮುನ್ನೆಚ್ಚರಿಕಾ ಸಂದೇಶ ರವಾನಿಸಿದೆ.

ಇಸ್ಲಾಮಿಕ್ ಸ್ಟೇಟ್ ನ ಉಗ್ರರು ಈ ದಾಳಿ ನಡೆಸುವ ಸಾಧ್ಯತೆಗಳಿದ್ದು, ಹೆಚ್ಚು ಜನರಿರುವಂತಹ ಧಾರ್ಮಿಕ ಪ್ರದೇಶಗಳು, ಮಾರುಕಟ್ಟೆ ಮತ್ತು ಹಬ್ಬಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ  ಸಾಧ್ಯತೆ ಇದೆ. ಹೀಗಾಗಿ ನಿಮ್ಮ ರಕ್ಷಣೆ ಕುರಿತಂತೆ ಜಾಗೃತರಾಗಿರುವಂತೆ ಸಂದೇಶದಲ್ಲಿ ರಾಯಭಾರ ಕಚೇರಿ ಹೇಳಿದೆ. ಅಮೆರಿಕದ ಗುಪ್ತಚರ ಅಧಿಕಾರಿಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರ  ಸಂಘಟನೆಯ ಅಂಗ ಸಂಸ್ಥೆಯಾದ ಐಎಸ್ ಐಎಲ್ ಅಥವಾ ಇಸಿಲ್ ಅಕಾ ಡಾಯಿಷ್ ಉಗ್ರ ಸಂಘಟನೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಈ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್, ಇಂಡಿಯನ್ ಮುಜಾಹಿದ್ದೀನ್ ಹಾಗೂ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳು ನೆರವಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com