ದೆಹಲಿಯಲ್ಲಿ ನಕಲಿ ಕಾಲ್ ಸೆಂಟರ್ ಜಾಲ ಪತ್ತೆ: ಮೂವರ ಬಂಧನ, 4.35 ಲಕ್ಷ ವಶ

ನಕಲಿ ಕಾಲ್ ಸೆಂಟರ್ ಜಾಲವನ್ನು ಪತ್ತೆ ಹಚ್ಚಿರುವ ದೆಹಲಿ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದು, 210 ಸಿಮ್ ಕಾರ್ಡ್, ಒಂದು ಲ್ಯಾಪ್ ಟಾಪ್ ಹಾಗೂ 4.35...
ಕಾಲ್ ಸೆಂಟರ್
ಕಾಲ್ ಸೆಂಟರ್

ನವದೆಹಲಿ: ನಕಲಿ ಕಾಲ್ ಸೆಂಟರ್ ಜಾಲವನ್ನು ಪತ್ತೆ ಹಚ್ಚಿರುವ ದೆಹಲಿ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದು, 210 ಸಿಮ್ ಕಾರ್ಡ್, ಒಂದು ಲ್ಯಾಪ್ ಟಾಪ್ ಹಾಗೂ 4.35 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಜೋಗಿಂದರ್ ಸಿಂಗ್, ಪ್ರಕಾಶ್ ಮತ್ತು ಗೌರವ್ ದುಬೆ ಎಂದು ಗುರುತಿಸಲಾಗಿದೆ. ಇನ್ನು ಇವರು ಕಾಲ್ ಸೆಂಟರ್ ಹೆಸರಲ್ಲಿ ಆನ್ ಲೈನ್ ನಲ್ಲಿ ಮೋಸ-ವಂಚನೆ ಮಾಡುತ್ತಿದ್ದರು.

ಕಾಲ್ ಸೆಂಟರ್ ಹೆಸರಲ್ಲಿ ಗ್ರಾಹಕರಿಗೆ ದೂರವಾಣಿ ಕರೆ ಮಾಡುವ ಮೂಲಕ ಅವರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಪಡೆಯುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಜಿಲ್ಲಾಧಿಕಾರಿ ನುಪೂರ್ ಪ್ರಸಾದ್ ಹೇಳಿದ್ದಾರೆ.

ಗ್ರಾಹಕರ ಕ್ರಿಡಿಟ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಿದ ನಂತರ ಆರೋಪಿಗಳು ಗ್ರಾಹಕರಿಗೆ ಕರೆ ಮಾಡಿ ತಮ್ಮ ಫೋನ್ ನಂಬರ್ ಗೆ ಬರುವ ಒಪಿಟಿ(ಒನ್ ಟೈಮ್ ಪಾಸ್ ವರ್ಡ್) ನಂಬರ್ ತಿಳಿಸುವಂತೆ ಹೇಳಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com