ಪಂಜಾಬ್ ಹರಿಯಾಣ ಜೊತೆ ನೀರು ಹಂಚಿಕೊಳ್ಳಬೇಕು:ಸುಪ್ರೀಂ ಕೋರ್ಟ್

ಪಂಜಾಬ್ ಸರ್ಕಾರ ನೆರೆಯ ಹರಿಯಾಣದೊಂದಿಗೆ ನೀರು ಹಂಚಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ
ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ
Updated on: 
ನವದೆಹಲಿ: ಪಂಜಾಬ್ ಸರ್ಕಾರ ನೆರೆಯ ಹರಿಯಾಣದೊಂದಿಗೆ ನೀರು ಹಂಚಿಕೊಳ್ಳಬೇಕು ಎಂದು ಗುರುವಾರ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸಟ್ಲೇಜ್‌ ಮತ್ತು ಯಮುನಾ ನದಿ ಜೋಡಿಸುವ ಕಾಲುವೆ ನಿರ್ಮಾಣದ ಯೋಜನೆಯನ್ನೇ ರದ್ದುಪಡಿಸಿ ಪಂಜಾಬ್‌ ವಿಧಾನಸಭೆ ಅಂಗೀಕರಿಸಿದ ನಿರ್ಣಯ ಅಸಾಂವಿಧಾನಿಕ ಕ್ರಮ ಎಂದಿದೆ.
ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ ವಿವಾದದ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ, ಹರ್ಯಾಣದ ಜೊತೆಗಿನ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವ ಯಾವುದೇ ಅಧಿಕಾರ ಪಂಜಾಬ್ ಸರ್ಕಾರಕ್ಕಿಲ್ಲ ಎಂದಿದೆ. ಅಲ್ಲದೆ ಕಾಲುವೆ ಕಾಮಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.
ಹರ್ಯಾಣ ರಾಜ್ಯಕ್ಕೆ ಹಂಚಿಕೆ ಮಾಡಲು ರಾಜ್ಯದಲ್ಲಿ ಸಾಕಷ್ಟು ನೀರು ಇಲ್ಲ ಎಂದು ಪಂಜಾಬ್ ಹೇಳಿತ್ತು. ಇದರ ವಿರುದ್ಧ ಹರ್ಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 
ಇನ್ನು ಸುಪ್ರೀಂ ಕೋಟ್ ತೀರ್ಪು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಸಂಸದ ಅಮರಿಂದರ್ ಸಿಂಗ್ ಅವರು ಸೇರಿದಂತೆ ಎಲ್ಲಾ ಶಾಸಕರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ.
ನಿನ್ನೆಯಷ್ಟೇ ಪಂಜಾಬ್ ಉಪ ಮುಖ್ಯಮಂತ್ರಿ ಸುಖಬಿರ್ ಸಿಂಗ್ ಬಾದಲ್ ಅವರು ಒಂದು ಹನಿ ನೀರು ಬಿಡುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com